ಗರ್ಭಿಣಿಯರಿಗೆ ಮುಂಜಾಗ್ರತಾ ಸಲಹೆ ಮತ್ತು ಚಿಕಿತ್ಸೆ

ಗರ್ಭಿಣಿಯರಿಗೆ ಮುಂಜಾಗ್ರತಾ ಸಲಹೆ ಮತ್ತು ಚಿಕಿತ್ಸೆ

ಗರ್ಭಧಾರಣೆ ( Pregnancy ) ಒಂದು ಶಾರೀರಿಕ ಸಂಬಂಧ ವಿದ್ಯಮಾನ ಆದ್ದರಿಂದ ಸಂಭಾವ್ಯ ಸಮಸ್ಯೆಗಳನ್ನೂ ಮತ್ತು ಅದರ ದುಷ್ಪರಿಣಾಮಗಳನ್ನೂ ತಡೆಗಟ್ಟುವುದು ಪ್ರಮುಖ ಅಂಶ . ನುರಿತ ಸ್ತ್ರೀ ರೋಗ ತಜ್ಞರಿಗೆ ಗರ್ಭಿಣಿಯರ ಈ ಸಮಸ್ಯೆಗಳ ಮುಂಚಿತ ಅರಿವಿದ್ದು ಅದಕ್ಕೆ ಮುಂಜಾಗ್ರತಾ ಸಲಹೆ ಚಿಕಿತ್ಸೆ ನೀಡಿ ಗರ್ಭಧಾರಣೆ ಸುಧಾರಿಸುವಲ್ಲಿ ನೆರವಾಗುತ್ತಾರೆ. ಗರ್ಭಧಾರಣೆ ಧೃಢೀಕರಿಸಿದ ಮೊದಲ ಹಂತದಲ್ಲಿಯೇ ಗರ್ಭಿಣಿಯರ ಅಪಾಯಕ್ಕೆ ಕಾರಣವಾಗುವ ಎಲ್ಲಾ ಸೂಕ್ಷ್ಮ ಅಂಶಗಳನ್ನೂ ಸಂಗ್ರಹಿಸಲಾಗುತ್ತದೆ, ವಿವರವಾಗಿ ದೈಹಿಕ ಕ್ರಮಗಳನ್ನು ಪಡೆಯಲಾಗುತ್ತದೆ ಮತ್ತು ರಕ್ತ ಮೂತ್ರದ ಪರೀಕ್ಷೆ ನಡೆಸಲಾಗುತ್ತದೆ. ನಂತರ ಪ್ರತಿ ಸಲವೂ ಗರ್ಭಿಣಿಯರ ತಪಾಸಣೆ, ಸ್ಕ್ಯಾನಿಂಗ್, ಮಗುವಿನ ಬೆಳವಣಿಗೆ ಮತ್ತು ಗರ್ಭಿಣಿಯ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಗರ್ಭಾವಸ್ಥೆಯ ಎರಡು ಹಂತಗಳಲ್ಲಿ ಅಂದರೆ ೧೧ ರಿಂದ ೧೩ + ೬ ವಾರಗಳಲ್ಲಿ ಎನ್ಟಿ / ಬಿಟಿ ಸ್ಕ್ಯಾನ್ ( NT / BT ) , ಡಬಲ್ ಮಾರ್ಕರ್ ಟೆಸ್ಟ್ Double Marker ) , ಸಂಪೂರ್ಣ ಅನೋಮಲಿ ಸ್ಕ್ಯಾನ್ ( Anamoly Scan ) ೨೧ ವಾರಗಳಲ್ಲಿ ಮಾಡುವಂತೆ ಸಲಹೆ ನೀಡುತ್ತೇವೆ.

ಭಾರತದ ಮಹಿಳೆಯರಲ್ಲಿ ಐರನ್( Iron ) , ಕ್ಯಾಲ್ಸಿಯಂ ( Calcium ) ಮತ್ತು ಪ್ರೋಟೀನ್ ( Protein ) ಅಂಶಗಳ ಕೊರತೆಯಿದ್ದು ಗರ್ಭಿಣಿಯರ ಮತ್ತು ಶಿಶುವಿನ ಆರೋಗ್ಯ ಬೆಳವಣಿಗೆಗೆ ಇವುಗಳನ್ನೊಳಗೊಂಡ ಆಹಾರದ ಸೇವನೆ ಅಗತ್ಯ. ಟಿಟಾನಸ್ ( Tetanus ) ಪ್ರತಿರಕ್ಷಣೆಯ ಇಮ್ಮ್ಯುನೈಸೇಷನ್ ( immunization ) ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸನ್ನು ಪ್ರತಿ ಗರ್ಭಿಣಿ ಸ್ತ್ರೀಯರಿಗೆ ನೀಡಲಾಗುತ್ತದೆ.

ರಕ್ತ ಹೀನತೆ ( Anaemia ) , ಮಧುಮೇಹ ( Diabetes ) , ಮೂತ್ರದ ಸೋಂಕು ( Urine Infection ) ಮುಂತಾದವುಗಳನ್ನು ತಡೆಗಟ್ಟಲು ಮತ್ತು ತಿಳಿಯಲು ರಕ್ತ ಪರೀಕ್ಷೆಗಳನ್ನು ಮಾಡಬೇಕು. ಪ್ರಸವ ಪೂರ್ವ ( Antenatal ) ವ್ಯಾಯಾಮ / ಯೋಗ ( Yoga ) / ಫಿಸಿಯೋಥೆರಪಿಗಳನ್ನು ( Physiotherapy )ಪ್ರತಿ ಗರ್ಭಿಣಿಯರಿಗೂ ಅನುಸಾರವಾಗಿ ಮಾಡುವಂತೆ ತಿಳಿಸಲಾಗುತ್ತದೆ. ೧೬ ರಿಂದ ೧೮ ವಾರಗಳ ಗರ್ಭಿಣಿಯರು ವ್ಯಾಯಾಮ ಮಾಡಬಹುದಾಗಿದೆ. ಉಸಿರಾಟದ ಸಂಬಂಧ ವ್ಯಾಯಾಮಗಳನ್ನು ( Breathing excercises ) ಮುಂಚೆಯೇ ವೈದ್ಯರ ಸಲಹೆ ಪಡೆದು ಮಾಡಬಹುದು. ಇದರಿಂದ ಗರ್ಭಿಣಿಯರ ಅರೋಗ್ಯ ಸುಧಾರಿಸುತ್ತದೆ. ವ್ಯಾಯಾಮಗಳಿಂದ ಸೊಂಟದ ನೋವು ( Back Pain ), ಸೆಳೆತ ( Cramps ) , ಮಂಡಿ ನೋವು ( Joint Pain ) ಕಡಿಮೆಯಾಗುವ ಸಾಧ್ಯತೆ ಇದೆ. ಸಲಹೆಯ ಮೇರೆಗೆ ವ್ಯಾಯಾಮ ಮಾಡುವುದರಿಂದ ನಾರ್ಮಲ್ ಡೆಲಿವರಿ ಅಂದರೆ ನೈಸರ್ಗಿಕ ಹೆರಿಗೆ ಆಗುವ ಸಾಧ್ಯತೆ ಹೆಚ್ಚು ಮತ್ತು ಪ್ರಸವ ಸಮಯವೂ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಪ್ರಸವದ ಸಮಯದ ಅತಿಯಾದ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ ಶಕ್ತಿ ಹೆಚ್ಚುತ್ತದೆ.

Request An Appointment!

image

ನಮ್ಮ ಸೇವೆಗಳು

ವಾಡಿಕೆಯ ಗರ್ಭಿಣಿಯರ ಆರೈಕೆ

ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮಗೆ ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನೀಡಲಾಗುವುದು.

Read More

ಆಪರೇಟಿವ್ ಲ್ಯಾಪರೊಸ್ಕೋಪಿ

ಲ್ಯಾಪರೊಸ್ಕೋಪಿ ಎನ್ನುವುದು ಕಿಬ್ಬೊಟ್ಟೆಯ ಕುಹರವನ್ನು ಹೊಟ್ಟೆಯ ಮೇಲೆ ಮಾಡಿದ ಸಣ್ಣ isions ೇದನಗಳ ಮೂಲಕ (5 ಮಿಮೀ) ದೃಶ್ಯೀಕರಿಸಲಾಗುತ್ತದೆ.

Read More

ಸಂತಾನ ಹೀನತೆಗೆ ಸೂಕ್ತ ಚಿಕಿತ್ಸೆ / ಗರ್ಭಧಾರಣೆಯ ಸಮಸ್ಯೆಗೆ

ಟ್ಯೂಬಲ್ ಅಡಚಣೆಯ ಚಿಕಿತ್ಸೆಗೆ ಸಾಮಾನ್ಯವಾಗಿ ಉಪವಿಭಾಗದ ಆರೈಕೆಗಾಗಿ ಉಲ್ಲೇಖದ ಅಗತ್ಯವಿರುತ್ತದೆ. ಮಹಿಳೆಯರು ಅಥವಾ ಪುರುಷರಲ್ಲಿ ವಿವರಿಸಲಾಗದ ಬಂಜೆತನ

Read More

ಋತುಬಂಧ ಸಮಸ್ಯೆಗೆ ಚಿಕಿತ್ಸೆ

Op ತುಬಂಧವು 40 ಅಥವಾ 50 ರ ದಶಕದಲ್ಲಿ ಸಂಭವಿಸಬಹುದು ಮತ್ತು ಇದು ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ನ ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳು

Read More

ಅಂಡಾಶಯ ಚೀಲ ಚಿಕಿತ್ಸೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದು ಸಾಮಾನ್ಯ ಹಾರ್ಮೋನ್ ಅಸಮತೋಲನವಾಗಿದ್ದು, ಇದು 10 ರಿಂದ 15 ಮಹಿಳೆಯರಲ್ಲಿ 1 ಜನರ ಮೇಲೆ ಪರಿಣಾಮ ಬೀರುತ್ತದೆ.

Read More

ಸ್ತ್ರೀ ಯರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ರೋಗನಿರ್ಣಯ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಟ್ರಾಸೌಂಡ್ ಬಹಳ ಮುಖ್ಯವಾದ ಸಾಧನವಾಗಿದೆ.

Read More

ಕಾಪರ್ ಟಿ ಇನ್ಸರ್ಷನ್

ಗರ್ಭಾಶಯದ ಸಾಧನ ಒಳಸೇರಿಸುವಿಕೆಯು ಹೊರರೋಗಿ ವಿಧಾನವಾಗಿದ್ದು, ಇದನ್ನು ತರಬೇತಿ ಪಡೆದ ಆರೋಗ್ಯ ವೃತ್ತಿಪರರು ನಿರ್ವಹಿಸಬೇಕು.

Read More

ಅತಿಸೂಕ್ಷ್ಮ ಗರ್ಭಿಣಿಯರ ಆರೈಕೆ / ಅಪಾಯದ ಗರ್ಭಿಣಿಯರ ಆರೈಕೆ

ಹೆಚ್ಚಿನ ಅಪಾಯದ ಗರ್ಭಧಾರಣೆಯು ಹೆರಿಗೆಯ ಮೊದಲು, ನಂತರ ಅಥವಾ ನಂತರ ಸವಾಲುಗಳನ್ನು ಉಂಟುಮಾಡಬಹುದು. ನೀವು ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರೆ, ನೀವು ಮತ್ತು ನಿಮ್ಮ

Read More

ಅಂಡೋತ್ಪತ್ತಿ ಚಿಕಿತ್ಸೆ / ಒವುಲೇಷನ್ ಇಂಡಕ್ಷನ್ / ಐ ವಿ ಎಫ್

ಅಂಡೋತ್ಪತ್ತಿ ಸಂಭವಿಸದಿದ್ದರೆ, ಉತ್ತೇಜಿಸಲು ಸಹಾಯ ಮಾಡಲು ಮುಟ್ಟಿನ ಪ್ರಾರಂಭದ ನಂತರ ಫಲವತ್ತತೆ drugs ಷಧಿಗಳನ್ನು ನೀಡಬಹುದು

Read More