Laparoscopy and Hysteroscopy

" ಸಣ್ಣರಂಧ್ರ / ಕೀಲು ರಂಧ್ರ ಶಸ್ತ್ರ ಚಿಕಿತ್ಸೆ
(Keyhole Surgery/ Pin hole Surgery / Laparoscopic Surgery)
"ಮತ್ತು"
ಗರ್ಭಕೋಶ / ಉದರ ದರ್ಶಕ ಶಸ್ತ್ರ ಚಿಕಿತ್ಸೆ
(Laparoscopy)"

ಸಣ್ಣರಂಧ್ರ ಶಸ್ತ್ರ ಚಿಕಿತ್ಸೆ ಮತ್ತು ಉದರದರ್ಶಕ ಶಸ್ತ್ರ ಚಿಕಿತ್ಸಾ ವಿಧಾನಗಳು ಇತ್ತೀಚಿನದ್ದಾಗಿದ್ದು ಇದರಿಂದ ಶಸ್ತ್ರ ಚಿಕಿತ್ಸೆಯ ನಂತರದ ದೈಹಿಕ ಆರೋಗ್ಯಾ ಲಾಭಗಳು ಬಹಳ ಸುಧಾರಿಸಿವೆ. ಹಾಗೂ ಈಗಿನ ಕಾಲದ ಮಹಿಳೆಯರು ತಮ್ಮ ಬಾಹ್ಯ ದೇಹ ಸೌಂದರ್ಯಕ್ಕೆ ಒತ್ತು ಕೊಡುವುದರಿಂದ ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆಯು ಅರೋಗ್ಯ , ತ್ವಚೆ , ಸೌಂದರ್ಯ ಮತ್ತು ಉತ್ತಮ ಜೀವನ ಕ್ರಮಕ್ಕೆ ಉಪಯುಕ್ತವಾಗಿದೆ.

ಈ ವಿಧಾನದಲ್ಲಿ ಹೆಸರೇ ಹೇಳುವಂತೆ, ೨ ಅಥವಾ ೩ ಸಣ್ಣ ರಂಧ್ರ / ತೂತುಗಳ (೫ ಎಮ್ ಎಮ್ ) ಮೂಲಕ ಉದರ / ಹೊಟ್ಟೆಯ ಭಾಗ (Abdomen) ಮತ್ತು ಗರ್ಭಕೋಶದ (Uterine cavity ) ಆಂತರಿಕ ಭಾಗಗಳನ್ನು ಪರಿಣಿತರಾದ ಸ್ತ್ರೀ ರೋಗ ಶಸ್ತ್ರ ಚಿಕಿತ್ಸಾ ವೈದ್ಯರು (Female Laparocopic Gynae Surgeon) ವೀಕ್ಸಿಸುತ್ತಾರೆ. ಸಾಧಾರಣವಾಗಿ ಸ್ತ್ರೀಯರಿಗೆ ಸಂಬಂಧಪಟ್ಟ ಎಲ್ಲ ತರಹದ ಶಸ್ತ್ರ ಚಿಕಿತ್ಸೆಗಳನ್ನೂ ಸಣ್ಣರಂಧ್ರ ಶಸ್ತ್ರ ಚಿಕಿತ್ಸೆ (Pin hole/Keyhole/Laparoscopic surgery) ಮೂಲಕ ಮಾಡಬಹುದಾಗಿದೆ.

ಸಣ್ಣರಂಧ್ರ ಚಿಕಿತ್ಸಾ ವಿಧಾನವನ್ನು ರೋಗ ನಿರ್ಣಾಯಕ ಹಂತದ ವಿವರಿಸಲಾಗದ ಸಂತಾನಹೀನತೆ (ಬಂಜೆತನ) (Unexplained infertility), ಡಿಂಬನಾಳದಲ್ಲಿನ ಬಲಹೀನತೆ (Tubal patency), ದೀರ್ಘಕಾಲದ ಶ್ರೇಣಿಯ ನೋವು ( Chronic Pelvic Pain ), ಬಯಾಪ್ಸಿ (Biopsy), ಸೌಮ್ಯ ಪ್ರಕಾರದ ಎಂಡೋಮೆಟ್ರಿಯೋಸಿಸ್ (Mild endometriosis) , ಕಿಬ್ಬೊಟ್ಟೆಯ ಒಳಗಿನ ರೋಗಲಕ್ಷಣ (Intra abdominal pathologies) ... ಮುಂತಾದ ಪ್ರಕಾರಗಳಲ್ಲಿ ಕುಶಲ ಪರಿಣಿತ ವೈದ್ಯರು ಬಳಸುತ್ತಾರೆ.

ಸಣ್ಣರಂಧ್ರದ ಮೂಲಕ ಗರ್ಭಕೋಶವನ್ನು ತೆಗೆಯುವ (Hysteretomy – Uterus removal), ಗರ್ಭಕೋಶದ ಗೆಡ್ಡೆ ತೆಗೆಯುವ (Myomectomy – Uterine Fibroid removal) , ಅಂಡಾಶಯ ಚೀಲ ತೆಗೆಯುವ (Ovarian Cyst reoval) , ಡಿಂಬನಾಳ ತೆಗೆಯುವ (Salpingectomy - Falopian tube removal) ಮುಂತಾದ ಸ್ತ್ರೀ ಸಂಬಂಧಿಸಿದ ಶಸ್ತ್ರಚಿತ್ಸೆಗಳನ್ನು ಗಾಯದ ಗುರುತಿಲ್ಲದ (No scar)/No permanent abdominal marks) ಹಾಗೆ ಮತ್ತು ಸ್ತ್ರೀ ಸೌಂದರ್ಯ ಕೆಡದ ರೀತಿಯಲ್ಲಿ ಮಾಡಬಹುದು. ( ಹೊಟ್ಟೆಯಮೇಲಿನ ಗಾಯದ ಕಲೆ ) ಹದಿಹರೆಯದ ಹೆಂಗಸರಲ್ಲಿ ಸಾಂಪ್ರದಾಯಿಕ ಹೊಟ್ಟೆ ಸೀಳುವ ಶಸ್ತ್ರ ಚಿಕಿತ್ಸೆಯಿಂದ (Traditional Open Surgery) ಸೌಂದರ್ಯ ಹಾಳಾಗುತ್ತದೆ. ಹಾಗೂ ದೇಹದ ಬಲಹೀನತೆ ಉಂಟಾಗುವ ಸಾಧ್ಯತೆಯೂ ಉಂಟು. ಆದ್ದರಿಂದ ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆಯು (Laparoscopic Surgery) ಶಾರೀರಿಕ ಸೌಂದರ್ಯದ ದೃಷ್ಠಿಯಿಂದಲೂ ಮತ್ತು ನಂತರದ ದೇಹದ ಸ್ವಾಸ್ಥ್ಯದ ತೀಕ್ಷ್ಣ ಹಾಗೂ ಉತ್ತಮ ಬೆಳವಣಿಗೆಗಳಿಂದಲೂ ಈ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯು ತನ್ನ ಗುಣಮಟ್ಟವನ್ನು ಎತ್ತಿ ಹಿಡಿಯುತ್ತದೆ.

ತುರ್ತು ಶಸ್ತ್ರಚಿಕಿತ್ಸೆಗಳಿಂದ ಛಿದ್ರಗೊಂಡ ಅಪಸ್ಥಾನೀಯ ಗರ್ಭಧಾರಣೆ (Ruptured ectopic Pregancy), ಅಂಡಾಶಯ ತಿರುಚಿರುವ (Ovarian Torsion) ಮುಂತಾದ ಸಮಯದಲ್ಲಿ ಅತ್ಯಂತ ಯಶಸ್ವಿಯಾಗಿ ನೋವಿಲ್ಲದ ಕೀಲುರಂಧ್ರ ಶಸ್ತ್ರ ಚಿಕಿತ್ಸೆ ನಡೆಸಬಹುದು. ಉದರದರ್ಶಕ ಶಸ್ತ್ರಚಿಕಿತ್ಸಾ (Hysteroscopic Surgery) ವಿಧಾನದಲ್ಲಿ ಯೋನಿ (Vagina) ಮತ್ತು ಗರ್ಭಕಂಠದ (Cervix) ಮುಖಾಂತರ ಹಿಸ್ಟರೊಸ್ಕೋಪನ್ನು (Hysteroscope) ಅಳವಡಿಸಿ ಗರ್ಭಕೋಶದ ಒಳಭಾಗದಲ್ಲಿನ ಭಾಗವನ್ನು ವೀಕ್ಷಿಸುತ್ತಾರೆ. ರೋಗ ನಿರ್ಣಾಯಕ ಒಳ ಗರ್ಭಕೋಶ ವೀಕ್ಷಣಾ ವಿಧಾನದಿಂದ ಐವಿಎಫ್ (IVF) ಚಿಕಿತ್ಸೆಗೆ ಮುಂಚಿನ ಬಯಾಪ್ಸಿ ಮಾಡಬೇಕಾಗಬಹುದು. ಉದರದರ್ಶಕ ಶಸ್ತ್ರ ಚಿಕಿತ್ಸೆಯಿಂದ ಪಾಲಿಪ್ ಗಳನ್ನು (Polyp) , ಗರ್ಭಕೋಶದ ಗೆಡ್ಡೆಗಳನ್ನು(Uterine Fibroids) , ಕಾಪರ್ ಟಿ (Copper T) , ಸೆಪ್ಟಲ್ ರೆಸೆಕ್ಷನ್ (Septal resection) ಹೀಗೆಯೇ ಹಲವಾರು ದೇಹದ ನ್ಯೂನತೆಗಳನ್ನು ಸುಲಭವಾಗಿ ಮಾಡಬಹುದು. ಸಣ್ಣರಂಧ್ರ ಶಸ್ತ್ರ ಚಿಕಿತ್ಸೆ (Pinhole Surgery) ಮತ್ತು ಗರ್ಭಕೋಶದ ಶಸ್ತ್ರ (Laparoscopy) ಚಿಕಿತ್ಸೆ ಇವೆರಡೂ ವಿಧಾನಗಳಿಂದ ಡಿಂಬನಾಳದ ಸಂತಾನೋತ್ಪತ್ತಿ ಶಸ್ತ್ರ ಚಿಕಿತ್ಸೆ (Tubal Cannulation – reoval of blocks in fallopian tubes) ಅಂದರೆ ಡಿಂಬನಾಳದಲ್ಲಿನ ಗೆಡ್ಡೆ ಅಥವಾ ಅಡೆತಡೆಗಳನ್ನು ತೆಗೆಯುತ್ತಾರೆ ಮತ್ತು ಸೆಪ್ಟಲ್ ರೆಸೆಕ್ಷನ್ (Septal resection) ಮಾಡಬಹುದು.

ಉದರದರ್ಶಕ ಶಸ್ತ್ರ ಚಿಕಿತ್ಸೆಯ ಲಾಭಗಳು :

ಶಸ್ತ್ರಚಿಕಿತ್ಸೆ ಸಮಯದಲ್ಲಿ ಅತಿ ಕಡಿಮೆ ರಕ್ತಸ್ರಾವ (Low Blood loss) ನೋವಿಲ್ಲದ ಅಂದರೆ ಶಸ್ತ್ರಚಿಕಿತ್ಸಾ ನಂತರದ ನರಳಿಕೆಯ ನೋವಿನಲ್ಲಿ ಸುಧಾರಣೆ (Painless Surgery) ಶಸ್ತ್ರಚಿಕಿತ್ಸೆ ನಂತರ ಅಂಗಾಂಗಗಳ ಅಂಟಿಕೊಳ್ಳುವಿಕೆ ಅತಿ ವಿರಳ (reduced adhesions) ಶಸ್ತ್ರಚಿಕಿತ್ಸಾ ನಂತರದ ಸೋಂಕು ಇರುವುದಿಲ್ಲ (No infections) ಬಹುಬೇಗ ಆರೋಗ್ಯದಲ್ಲಿ ಚೇತರಿಕೆ, (Faster recovery & back to work) ದೇಹ ತ್ವಚೆ ಅಥವಾ ಸೌಂದರ್ಯ ನಶಿಸುವುದಿಲ್ಲ (ಗಾಯವಿಲ್ಲದ ಚಿಕಿತ್ಸೆ) ( Scarless surgery / No permanenet big scar on the abdomen) ಮತ್ತು ಶಸ್ತ್ರ ಚಿಕಿತ್ಸೆ ನಂತರ ಆಸ್ಪತ್ರೆಯಲ್ಲಿ ಇರಬೇಕಾದ ಸಮಯ ಬಹಳ ಕಡಿಮೆ. (reduced post operative hospital stay) ಇದರಲ್ಲಿನ ಕೆಲವು ವಿಧಾನಗಳು ಒಂದೇ ದಿನದ ಪ್ರಕ್ರಿಯೆಯಾಗಿದ್ದು (Day care procedures) ಅಂದೇ ಸಾಯಂಕಾಲದ ಹೊತ್ತಿಗೆ ಆರೋಗ್ಯವಾಗಿ ಮನೆಗೆ ಹಿಂತಿರುಗಬಹುದು ಮತ್ತು ಬೇಗನೇ ನಿತ್ಯದ ಕೆಲಸಗಳಿಗೆ (Back to daily routine work) ಹಾಜರಾಗಬಹುದು. ದೀರ್ಘ ಪ್ರಮಾಣದ ವಿಧಾನಗಳಾದರೆ ಒಂದೆರಡು ದಿನ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯಬೇಕಾಗುತ್ತದೆ. ಆದರೂ, ಯಾವುದೇ ಶಸ್ತ್ರಚಿಕಿತ್ಸೆಯಂತೆ ಈ ವಿಧಾನದಲ್ಲೂ ಸಾಮಾನ್ಯ ಅಪಾಯದ (Risk factors are common) ಸಾಧ್ಯತೆ ಇದ್ದೇ ಇರುತ್ತದೆ

ಗರ್ಭಕೋಶದ ಗೆಡ್ಡೆಗಳು : (UTERINE FIBROIDS)

ಇದು ಅತ್ಯಂತ ಸಾಧಾರಣವಾಗಿ ಗರ್ಭಕೋಶದಲ್ಲಿ (Uterine cavity) ಕಾಣುವ ಹಾನಿಕಾರಕ ಅಥವಾ ಕ್ಯಾನ್ಸರ್ (cancer) ಸೋಂಕಿಲ್ಲದ ಗೆಡ್ಡೆಗಳು. ಸುಮಾರು ೧೫ ರಿಂದ ೫೦ ವರುಷದಲ್ಲಿನ ಶೇಕಡಾ ೩೦ ರಿಂದ ೩೫ % ಸಂತಾನ ಶಕ್ತ ಮಹಿಳೆಯರಲ್ಲಿ ಕಾಣಸಿಗುವ ಸಮಸ್ಯೆ. ಇದೊಂದು ನಯವಾದ ಮಾಂಸದ ಗೆಡ್ಡೆಗಳಾಗಿದ್ದು (Fibroids) ಇವು ಈಸ್ಟ್ರೋಜೆನ್ ಹಾರ್ಮೋನಿನ (Estrogen) ಪ್ರಮಾಣದ ಅವಲಂಬಿತವಾಗಿದೆ. ಇವು ನಿಧಾನ ಗತಿಯಲ್ಲಿ ಬೆಳೆವ ಗೆಡ್ಡೆಗಳಾಗಿರುತ್ತವೆ. ಸಾಮಾನ್ಯವಾಗಿ ಪ್ರೌಢಾವಸ್ಥೆಗೆ ಮುನ್ನ ಕಾಣುವುದಿಲ್ಲ ಮತ್ತು ಋತುಚಕ್ರ ನಿಂತ (Menopause) ಮೇಲೆ ಅಂದರೆ ೪೫ ರಿಂದ ೫೦ ವರುಷದ ನಂತರ ನಶಿಸಿ ಹೋಗುತ್ತದೆ. ಇದರ ಗಾತ್ರ ಮಾತ್ರ ಚಿಕ್ಕದಾದ ಬಟಾಣಿಯಿಂದ ಒಂದು ಫುಟ್ಬಾಲ್ ಗಾತ್ರದವರೆಗೆ ಹೊಟ್ಟೆಯನ್ನು ತುಂಬುವ ಸಾಧ್ಯತೆಯೂ ಉಂಟು.

ಸಾಮಾನ್ಯವಾಗಿ ಗರ್ಭಕೋಶದ ಗೆಡ್ಡೆಗಳು (Uterine fibroids) ಯಾವುದೇ ತರಹದ ಲಕ್ಷಣಗಳಿಲ್ಲದೆಯೇ ಬೆಳೆಯುತ್ತಲಿರುತ್ತದೆ. ಕೆಲವೊದುಬಾರಿ ಗೆಡ್ಡೆಗಳು ತಮ್ಮ ಲಕ್ಷಣಗಳನ್ನು ಸಾದರಪಡಿಸಿದಾಗ ಅಲ್ಟ್ರಾಸೌಂಡ್ ಸ್ಕ್ಯಾನಿಗ್ (Ultrasound scanning) ಮೂಲಕ ಇದರ ಪೂರ್ಣ ಮಾಹಿತಿಯ ಅರಿವಾಗುತ್ತದೆ.

ಗರ್ಭಕೋಶದ ಗೆಡ್ಡೆಗಳ (Uterine Fibroids) ಇರುವಿಕೆಯ ಲಕ್ಷಣಗಳೆಂದರೆ : ಋತುಚಕ್ರ (Menstruation/ Monthly periods) ಅಥವಾ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ (Heavy bleeding) , ಮುಟ್ಟಿನ ಸಮಯದಲ್ಲಿ ಕಾಣುವ ನೋವು (Pain in the abdomen), ಬೆನ್ನು ನೋವು (low back ache), ಹೊಟ್ಟೆಯಲ್ಲಿ ಭಾರವೆನಿಸುವ (Heaviness / Mass in the abdomen) ಹಾಗೆ ವೇದನೆ, ಬಂಜೆತನ ಅಥವಾ ಸಂತಾನ ಹೀನತೆ (Infertility), ಗರ್ಭಧಾರಣೆಯ ನಂತರ ಗರ್ಭ ನಿಲ್ಲುವುದಿಲ್ಲ (early pregnancy loss) ಮತ್ತು ಅಕಾಲಿಕ ಹೆರಿಗೆಯ ಅಪಾಯ. (Premature Delivery) ಗರ್ಭ ಕೋಶದ ಗೆಡ್ಡೆಗಳು ಗಾತ್ರದಲ್ಲಿ ದೊಡ್ಡದಾಗಿದ್ದರೆ ಅದು ಮೂತ್ರಕೋಶದ (Urinary bladder) ಮುಂಭಾಗದ ಮೇಲೆ ಒತ್ತಡ ಹೇರುತ್ತದೆ. ಆಗ ಇದರಿಂದ ಮೂತ್ರ (Urine blockage) ಕಟ್ಟುವಂತೆ ಮಾಡುತ್ತದೆ, ಪರಿಪೂರ್ಣ ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು (Incomlete emptying of bladder), ಮರುಕಳಿಸಿ ಬರುವ ಮೂತ್ರಕೋಶದ ಸೋಂಕು (repeated Urinary Infections) ಮುಂತಾದವುಗಳು. ಹಾಗೆಯೇ ಈ ಗೆಡ್ಡೆಗಳು (Fibroids) ಕರುಳಿನ (Bowel) ಮೇಲೆ ಒತ್ತಿಕೊಂಡಾಗ ಮಲಬದ್ಧತೆ (Constipation) , ಮಲ ವಿಸರ್ಜನೆಯಲ್ಲಿ ವಿಫಲತೆ (Incomplete emptying) ತೊಂದರೆಗಳು ಸಾಮಾನ್ಯ.

ಗರ್ಭಕೋಶದ ಗೆಡ್ಡೆ (Uterine fibroids) ಬರಲು ಕಾರಣಗಳು : ಬೇಗ ಶುರುವಾದ ಋತುಚಕ್ರ (early menarche) , ಬಹಳ ನಿಧಾನವಾಗಿ ಮುಟ್ಟು ನಿಲ್ಲುವಿಕೆ (Late menopause) , ಬೊಜ್ಜು(Obesity) , ದೀರ್ಘಕಾಲದ ಗರ್ಭಧಾರಣೆ (Late conception) ಅಥವಾ ವಂಶಪಾರಂಪರಿಕವಾಗಿಯೂ (Herididtary reasons) ಬರಬಹುದು. ಟ್ರಾನ್ಸ್ ವೆಜೈನಲ್ ಅಲ್ಟ್ರಾಸೌಂಡ್ ನಿಂದ (Trans vagins ultrasound) ಗರ್ಭಕೋಶದ ಗೆಡ್ಡೆಗಳ (fibroids) ಪತ್ತೆ ಹಚ್ಚುವುದು ಸುಲಭ ಮತ್ತು ೩- ಡಿ ಅಲ್ಟ್ರಾಸೌಂಡ್ (3D Ultrasound) ವಿಧಾನದಿಂದ ಈ ಗೆಡ್ಡೆಗಳನ್ನು (Fibroids) ಸೂಕ್ಷ್ಮವಾಗಿ ಗ್ರಹಿಸಬಹುದು. ಗೆಡ್ಡೆಗಳು ಹೆಚ್ಚು (Bigger fibroids) ಗಾತ್ರದಲ್ಲಿದ್ದರೆ ಅಥವಾ ಗೆಡ್ಡೆಗಳಿಂದ ಶಾರೀರಿಕ ನೋವು (Symptomatic) ತೊಂದರೆಯುಂಟಾಗುವ ಸಂಧರ್ಭ ಕಂಡಾಗ ವೈದ್ಯಕೀಯ ಚಿಕಿತ್ಸೆ ಅಗತ್ಯ. ಗೆಡ್ಡೆಗಳು ಬೆಳೆಯುತ್ತ ಹೋದರೆ ಅವು ಕ್ಯಾನ್ಸರ್ ಗೆ (Cancer) ತಿರುಗುವ ಸಾಧ್ಯತೆ ಹೆಚ್ಚು ಆಗ ಶಸ್ತ್ರಚಿಕಿತ್ಸೆಯೇ ಸೂಕ್ತ (Laparoscopic surgery) ಪರಿಹಾರ. ಸಣ್ಣ ಗೆಡ್ಡೆಗಳನ್ನು ಮದ್ದುಗಳಿಂದಲೇ ಗುಣಪಡಿಸಬಹುದು. ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆಯ ಮೂಲಕ ಈ ಗೆಡ್ಡೆಗಳನ್ನು ಪರಿಣತಿ ಹೊಂದಿದ ವೈದ್ಯರು ಬಹಳ ಸುಲಭವಾಗಿ ತೆಗೆಯುತ್ತಾರೆ. (ಲ್ಯಾಪರೊಸ್ಕೋಪಿ – laparoscopy ಅಥವಾ ಹೈಸ್ಟರೊಸ್ಕೋಪಿ – Hysterosopy) ಸಣ್ಣರಂಧ್ರ ಶಸ್ತ್ರ ಚಿಕಿತ್ಸೆಯೆಂದರೆ ಕಡಿಮೆ ರಕ್ತ ಸ್ರಾವ (Less blood loss) , ಶಸ್ತ್ರಚಿಕಿತ್ಸೆ ನಂತರದ ನೋವಿನಲ್ಲಿ ಸುಧಾರಣೆ (Painess surgery), ಶಸ್ತ್ರಚಿಕಿತ್ಸೆ ನಂತರದ ಸೋಂಕಿನಲ್ಲಿ ಸುಧಾರಣೆ (No post operative infections) ಬಹುಬೇಗನೆ ಆರೋಗ್ಯದಲ್ಲಿ ಚೇತರಿಕೆ, (Faster revovery) ದೇಹದ ಸೌಂದರ್ಯದ ದೃಷ್ಟಿಯಿಂದ ಹೊಟ್ಟೆಯನ್ನು ಕುಯ್ಯದೇ (No cutting of abdomen) ಈ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹೊಟ್ಟೆಯ ಮೇಲಿನ ಗಾಯದ ಗುರುತು (No permananent big scar on abdomen) ಇರುವುದಿಲ್ಲ. ಆದ್ದರಿಂದ ಈ ವಿಧಾನವು ಈಗಿನ ಮಹಿಳೆಯರಲ್ಲಿ ಜನಪ್ರಿಯ ಒಲವು ಹಾಗೂ ಆಸ್ಪತ್ರೆಯಲ್ಲಿ ತಂಗುವ ಸಮಯದಲ್ಲೂ ಸುಧಾರಣೆ (reduced hospital stay).

Request An Appointment!

image

ನಮ್ಮ ಸೇವೆಗಳು

ವಾಡಿಕೆಯ ಗರ್ಭಿಣಿಯರ ಆರೈಕೆ

ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮಗೆ ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನೀಡಲಾಗುವುದು.

Read More

ಆಪರೇಟಿವ್ ಲ್ಯಾಪರೊಸ್ಕೋಪಿ

ಲ್ಯಾಪರೊಸ್ಕೋಪಿ ಎನ್ನುವುದು ಕಿಬ್ಬೊಟ್ಟೆಯ ಕುಹರವನ್ನು ಹೊಟ್ಟೆಯ ಮೇಲೆ ಮಾಡಿದ ಸಣ್ಣ isions ೇದನಗಳ ಮೂಲಕ (5 ಮಿಮೀ) ದೃಶ್ಯೀಕರಿಸಲಾಗುತ್ತದೆ.

Read More

ಸಂತಾನ ಹೀನತೆಗೆ ಸೂಕ್ತ ಚಿಕಿತ್ಸೆ / ಗರ್ಭಧಾರಣೆಯ ಸಮಸ್ಯೆಗೆ

ಟ್ಯೂಬಲ್ ಅಡಚಣೆಯ ಚಿಕಿತ್ಸೆಗೆ ಸಾಮಾನ್ಯವಾಗಿ ಉಪವಿಭಾಗದ ಆರೈಕೆಗಾಗಿ ಉಲ್ಲೇಖದ ಅಗತ್ಯವಿರುತ್ತದೆ. ಮಹಿಳೆಯರು ಅಥವಾ ಪುರುಷರಲ್ಲಿ ವಿವರಿಸಲಾಗದ ಬಂಜೆತನ

Read More

ಋತುಬಂಧ ಸಮಸ್ಯೆಗೆ ಚಿಕಿತ್ಸೆ

Op ತುಬಂಧವು 40 ಅಥವಾ 50 ರ ದಶಕದಲ್ಲಿ ಸಂಭವಿಸಬಹುದು ಮತ್ತು ಇದು ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ನ ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳು

Read More

ಅಂಡಾಶಯ ಚೀಲ ಚಿಕಿತ್ಸೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದು ಸಾಮಾನ್ಯ ಹಾರ್ಮೋನ್ ಅಸಮತೋಲನವಾಗಿದ್ದು, ಇದು 10 ರಿಂದ 15 ಮಹಿಳೆಯರಲ್ಲಿ 1 ಜನರ ಮೇಲೆ ಪರಿಣಾಮ ಬೀರುತ್ತದೆ.

Read More

ಸ್ತ್ರೀ ಯರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ರೋಗನಿರ್ಣಯ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಟ್ರಾಸೌಂಡ್ ಬಹಳ ಮುಖ್ಯವಾದ ಸಾಧನವಾಗಿದೆ.

Read More

ಕಾಪರ್ ಟಿ ಇನ್ಸರ್ಷನ್

ಗರ್ಭಾಶಯದ ಸಾಧನ ಒಳಸೇರಿಸುವಿಕೆಯು ಹೊರರೋಗಿ ವಿಧಾನವಾಗಿದ್ದು, ಇದನ್ನು ತರಬೇತಿ ಪಡೆದ ಆರೋಗ್ಯ ವೃತ್ತಿಪರರು ನಿರ್ವಹಿಸಬೇಕು.

Read More

ಅತಿಸೂಕ್ಷ್ಮ ಗರ್ಭಿಣಿಯರ ಆರೈಕೆ / ಅಪಾಯದ ಗರ್ಭಿಣಿಯರ ಆರೈಕೆ

ಹೆಚ್ಚಿನ ಅಪಾಯದ ಗರ್ಭಧಾರಣೆಯು ಹೆರಿಗೆಯ ಮೊದಲು, ನಂತರ ಅಥವಾ ನಂತರ ಸವಾಲುಗಳನ್ನು ಉಂಟುಮಾಡಬಹುದು. ನೀವು ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರೆ, ನೀವು ಮತ್ತು ನಿಮ್ಮ

Read More

ಅಂಡೋತ್ಪತ್ತಿ ಚಿಕಿತ್ಸೆ / ಒವುಲೇಷನ್ ಇಂಡಕ್ಷನ್ / ಐ ವಿ ಎಫ್

ಅಂಡೋತ್ಪತ್ತಿ ಸಂಭವಿಸದಿದ್ದರೆ, ಉತ್ತೇಜಿಸಲು ಸಹಾಯ ಮಾಡಲು ಮುಟ್ಟಿನ ಪ್ರಾರಂಭದ ನಂತರ ಫಲವತ್ತತೆ drugs ಷಧಿಗಳನ್ನು ನೀಡಬಹುದು

Read More