Infertility Management

"ಬಂಜೆತನ ನಿವಾರಣಾ ಕ್ಲಿನಿಕ್ " ಅಥವಾ " ಸಂತಾನ ಪ್ರಾಪ್ತಿ ಚಿಕಿತ್ಸಾ ಕೇಂದ್ರ "
(Fertility Clinic)

ದಂಪತಿಗಳು ೧೨ ತಿಂಗಳುಗಳ ಕಾಲ ಯಾವುದೇ ನಿರ್ಬಂಧವಿಲ್ಲದೇ ದೈಹಿಕ ಸಂಪರ್ಕ ಅಥವಾ ಸಂಭೋಗಕ್ರಿಯೆಯಲ್ಲಿ (Intercourse) ಪಾಲ್ಗೊಂಡು ನಂತರವೂ ಗರ್ಭಧಾರಣೆ ಪ್ರಾಪ್ತಿಯಾಗದಿದ್ದಲ್ಲಿ (Unable to conceive) ಅದನ್ನು ಬಂಜೆತನ ಅಥವಾ ಸಂತಾನ ಹೀನತೆ ( Infertility Problems ) ಎಂದು ಕರೆಯಲಾಗುತ್ತದೆ. ಈಚೆಗೆ ಐದರಲ್ಲಿ ಒಬ್ಬ ದಂಪತಿಗೆ ಗರ್ಭಧಾರಣೆಯ ಸಮಸ್ಯೆಯಿದ್ದು ಈ ಪಿಡುಗು ನವಪೀಳಿಗೆಯ ದಂಪತಿಗಳಲ್ಲಿ ಹೆಚ್ಚಾಗಿ ಕಾಡುತ್ತಲಿದೆ. ಒತ್ತಡದ ಜೀವನಶೈಲಿ (Lifestyle) ಮತ್ತು ಸಂಭೋಗಕ್ರಿಯೆಯಲ್ಲಿ ವಿರಳತೆ ಕಾರಣಗಳು (Infrequent intercourse).

ಗಂಡಸರಲ್ಲಿ ವೀರ್ಯದಲ್ಲಿನ ಅಸಹಜತೆಗಳು (Sperm abnormalities) ಅಂದರೆ ವೀರ್ಯದ ಪ್ರಮಾಣದಲ್ಲಿ ಕ್ಷೀಣತೆ (reduced sperm count) , ವೀರ್ಯಾಣುಗಳ ಚಲನದಲ್ಲಿ ಕೊರತೆ, (Low Motility) ವೀರ್ಯಾಣುಗಳ ರೂಪವಿಜ್ಞಾನ (abnormal morphology) , ವೀರ್ಯಾಣುಗಳ ಅನುಪಸ್ಥಿತಿ (absence of sperm) , ಶಿಶ್ನದ ಗಡುಸುತನ (erectile dysfunction) , ಸಂಭೋಗ ಸಮಯದ ವೀರ್ಯ ಸ್ಖಲನಾ ತೊಂದತೆಗಳು (ejaculatory failure) , ಸೋಂಕುಗಳು (Infections) , ಹೀಗೆ ಹಲವಾರು ಕಾರಣಗಳು ಫಲವತ್ತತೆ ಸಫಲಗೊಳಿಸುವಲ್ಲಿ (Fertility / Unable to conceive) ತಡೆಯುಂಟು ಮಾಡುತ್ತವೆ.

ಹೆಂಗಸರಲ್ಲಿನ ಕಾರಣಗಳೆಂದರೆ : (Female problems)

ಅಂಡೋತ್ಪತ್ತಿಯಾಗದಿರುವುದು (Ovulatory dysfunction), ಡಿಂಬನಾಳದಲ್ಲಿನ ಸೋಂಕು ಅಥವಾ ಗೆಡ್ಡೆ(Tubal block), ಗರ್ಭಕೋಶದ ಸರಳತೆ, ಗರ್ಭಕೋಶದಲ್ಲಿನ ಅಂಟಿದ ಇತರೆ ಭಾಗಗಳು, ಗರ್ಭಕೋಶದ ಅಸಹಜತೆಗಳು (Uterine abnormalities), ಎಂಡೋಮೆಟ್ರಿಯೋಸಿಸ್ (endometriosis), ಅಡಿನೊಮಯೋಸಿಸ್ (Adenomyosis) , ಪಿಸಿಓಎಸ್ (PCOS) ಮುಂತಾದವುಗಳು. ಕೆಲವೊಂದುಬಾರಿ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ತೊಂದರೆಯಿದ್ದರೆ, ಕೆಲವೊಂದು ಬಾರಿ ಸಮಸ್ಯೆ ತಿಳಿಯದೇ ವಿವರಿಸಲಾಗದ ಬಂಜೆತನ (Unexplained infertility) ಎಂದು ಗುರುತಿಸಲ್ಪಡುತ್ತದೆ. ಮೊದಲಿಗೆ ದಂಪತಿಗಳನ್ನು ನಿರ್ಧಾರಿತ ತಪಾಸಣೆಗೆ ಒಳಪಡಿಸಲಾಗುತ್ತದೆ. ಟ್ರಾನ್ಸ್ ವಜೈನಲ್ ಸ್ಕ್ಯಾನ್ನನ್ನು ಹೆಂಗಸಿನ ಋತುಚಕ್ರದ ೨ ಅಥವಾ ೩ ನೆೇ ದಿನ ಮಾಡಿದಾಗ ಅನೇಕ ಮಾಹಿತಿ ಲಭ್ಯವಾಗುತ್ತದೆ. ಸಂಭೋಗಕ್ರಿಯೆ ನಿರ್ಬಂಧದ ೨ -೮ ದಿನಗಳ ನಂತರದ ಗಂಡಸಿನ ವೀರ್ಯದ ತಪಾಸಣೆ ಮಾಡಲಾಗಿ ವೀರ್ಯಾಣು ಸಂಬಂಧಿತ ನಿಯತಾಂಕಗಳು ಲಭ್ಯವಾಗುತ್ತವೆ. ಕ್ರಮೇಣ ದಂಪತಿಗಳ ಹಾರ್ಮೋನುಗಳ ತಪಾಸಣೆ, ಅನುಸಾರವಾಗಿ ಹಿಸ್ಟರೊಲ್ಯಾಪರೊಸ್ಕೋಪಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಹೆಂಗಸಿನ ನೈಸರ್ಗಿಕ ಮಾಸಿಕ ಋತುಚಕ್ರವನ್ನು ಗಮನಿಸಲಾಗಿ ನಿಗದಿತ ಸ್ಕ್ಯಾನ್ ಮತ್ತು ತಪಾಸಣೆ ಮೂಲಕ ಕೋಶಕಗಳ ಬೆಳವಣಿಗೆಯ ಕ್ರಮ, ಅಂಡೋತ್ಪತ್ತಿಯ ಪ್ರಕ್ರಿಯೆ, ಗರ್ಭಕೋಶದ ಬೆಳವಣಿಗೆ, ರಕ್ತ ಸಂಚಲನೆ ಎಲ್ಲವನ್ನೂ ತಿಳಿಯಲಾಗುತ್ತದೆ.

ಸೂಕ್ತ ಚಿಕಿತ್ಸೆ ನಿರ್ಧರಿಸಿದ ನಂತರ ಮುಂದಿನ ಹೆಜ್ಜೆ ಅಂಡೋತ್ಪತ್ತಿಯ ದಕ್ಷತೆ ಪ್ರಕ್ರಿಯೆಗೆ ಚಾಲನೆ ಅಂದರೆ ಅಂಡಾಶಯಗಳನ್ನು ಮಾತ್ರೆಗಳು ಮತ್ತು ಚುಚ್ಚು ಮದ್ದುಗಳ ಸಹಾಯದಿಂದ ಉತ್ತೇಜಿಸಲಾಗುತ್ತದೆ. ಇದರಿಂದ ಕೋಶಕಗಳ ಬೆಳವಣಿಗೆ, ಅಂಡಾಣುಗಳ ಬೆಳವಣಿಗೆ ಹಾಗೂ ಬಿಡುಗಡೆ ಇವುಗಳನ್ನು ಕ್ರಮವಾಗಿ ಸ್ಕ್ಯಾನ್ಗಳನ್ನು ಮಾಡುತ್ತ್ತಾ ಸೂಕ್ಷ್ಮವಾಗಿ ಮಾಹಿತಿ ತಿಳಿಯಲಾಗುತ್ತದೆ. ಈ ರೀತಿ ತಪಾಸಣಾ ಋತುಚಕ್ರದ ಸಮಯದಲ್ಲಿ ಐಯುಐ ಮಾಡುವ ಸಾಧ್ಯತೆ ಇದೆ. ಗಂಡಸಿನ / ಪುರುಷತ್ವದ ಕಾರಣಗಳಿದ್ದಾಗ ಲ್ಯಾಬ್ನಲ್ಲಿ ಸಂಸ್ಕರಿಸಿ ಆರಿಸಲ್ಪಟ್ಟ ಯೋಗ್ಯ ವೀರ್ಯಾಣುಗಳನ್ನು ಹೆಂಗಸಿನ ಗರ್ಭನಾಳದಲ್ಲಿ ಸೇರಿಸಲಾಗುತ್ತದೆ. ಐಯುಐ ವಿಧಾನವು ೩ -೪ ಬಾರಿ ಮಾಡಿಯೂ ಯಶಸ್ವಿಯಾಗದಿದ್ದಾಗ ಸಂತಾನ ಪ್ರಾಪ್ತಿ ಚಿಕಿತ್ಸೆಯ ಪ್ರಮುಖ ಘಟ್ಟವೆಂದರೆ ಐವಿಎಫ್. ಐವಿಎಫ್ ಸಂತಾನ ಪ್ರಾಪ್ತಿ ವಿಧಾನ ಚಿಕಿತ್ಸೆಗಳ ಅಂತಿಮ ಹಂತವಾಗಿರುತ್ತದೆ

Request An Appointment!

image

ನಮ್ಮ ಸೇವೆಗಳು

ವಾಡಿಕೆಯ ಗರ್ಭಿಣಿಯರ ಆರೈಕೆ

ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮಗೆ ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನೀಡಲಾಗುವುದು.

Read More

ಆಪರೇಟಿವ್ ಲ್ಯಾಪರೊಸ್ಕೋಪಿ

ಲ್ಯಾಪರೊಸ್ಕೋಪಿ ಎನ್ನುವುದು ಕಿಬ್ಬೊಟ್ಟೆಯ ಕುಹರವನ್ನು ಹೊಟ್ಟೆಯ ಮೇಲೆ ಮಾಡಿದ ಸಣ್ಣ isions ೇದನಗಳ ಮೂಲಕ (5 ಮಿಮೀ) ದೃಶ್ಯೀಕರಿಸಲಾಗುತ್ತದೆ.

Read More

ಸಂತಾನ ಹೀನತೆಗೆ ಸೂಕ್ತ ಚಿಕಿತ್ಸೆ / ಗರ್ಭಧಾರಣೆಯ ಸಮಸ್ಯೆಗೆ

ಟ್ಯೂಬಲ್ ಅಡಚಣೆಯ ಚಿಕಿತ್ಸೆಗೆ ಸಾಮಾನ್ಯವಾಗಿ ಉಪವಿಭಾಗದ ಆರೈಕೆಗಾಗಿ ಉಲ್ಲೇಖದ ಅಗತ್ಯವಿರುತ್ತದೆ. ಮಹಿಳೆಯರು ಅಥವಾ ಪುರುಷರಲ್ಲಿ ವಿವರಿಸಲಾಗದ ಬಂಜೆತನ

Read More

ಋತುಬಂಧ ಸಮಸ್ಯೆಗೆ ಚಿಕಿತ್ಸೆ

Op ತುಬಂಧವು 40 ಅಥವಾ 50 ರ ದಶಕದಲ್ಲಿ ಸಂಭವಿಸಬಹುದು ಮತ್ತು ಇದು ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ನ ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳು

Read More

ಅಂಡಾಶಯ ಚೀಲ ಚಿಕಿತ್ಸೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದು ಸಾಮಾನ್ಯ ಹಾರ್ಮೋನ್ ಅಸಮತೋಲನವಾಗಿದ್ದು, ಇದು 10 ರಿಂದ 15 ಮಹಿಳೆಯರಲ್ಲಿ 1 ಜನರ ಮೇಲೆ ಪರಿಣಾಮ ಬೀರುತ್ತದೆ.

Read More

ಸ್ತ್ರೀ ಯರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ರೋಗನಿರ್ಣಯ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಟ್ರಾಸೌಂಡ್ ಬಹಳ ಮುಖ್ಯವಾದ ಸಾಧನವಾಗಿದೆ.

Read More

ಕಾಪರ್ ಟಿ ಇನ್ಸರ್ಷನ್

ಗರ್ಭಾಶಯದ ಸಾಧನ ಒಳಸೇರಿಸುವಿಕೆಯು ಹೊರರೋಗಿ ವಿಧಾನವಾಗಿದ್ದು, ಇದನ್ನು ತರಬೇತಿ ಪಡೆದ ಆರೋಗ್ಯ ವೃತ್ತಿಪರರು ನಿರ್ವಹಿಸಬೇಕು.

Read More

ಅತಿಸೂಕ್ಷ್ಮ ಗರ್ಭಿಣಿಯರ ಆರೈಕೆ / ಅಪಾಯದ ಗರ್ಭಿಣಿಯರ ಆರೈಕೆ

ಹೆಚ್ಚಿನ ಅಪಾಯದ ಗರ್ಭಧಾರಣೆಯು ಹೆರಿಗೆಯ ಮೊದಲು, ನಂತರ ಅಥವಾ ನಂತರ ಸವಾಲುಗಳನ್ನು ಉಂಟುಮಾಡಬಹುದು. ನೀವು ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರೆ, ನೀವು ಮತ್ತು ನಿಮ್ಮ

Read More

ಅಂಡೋತ್ಪತ್ತಿ ಚಿಕಿತ್ಸೆ / ಒವುಲೇಷನ್ ಇಂಡಕ್ಷನ್ / ಐ ವಿ ಎಫ್

ಅಂಡೋತ್ಪತ್ತಿ ಸಂಭವಿಸದಿದ್ದರೆ, ಉತ್ತೇಜಿಸಲು ಸಹಾಯ ಮಾಡಲು ಮುಟ್ಟಿನ ಪ್ರಾರಂಭದ ನಂತರ ಫಲವತ್ತತೆ drugs ಷಧಿಗಳನ್ನು ನೀಡಬಹುದು

Read More