FAQ

೧. ಐವಿಎಫ್ ಚಿಕಿತ್ಸೆಯಿಂದ ಗರ್ಭಪಾತವಾಗುವ ಸಾಧ್ಯತೆ ಇದೆಯೇ ? ಐವಿಎಫ್ ಶಿಶುಗಳ ನೈಸರ್ಗಿಕ ಹೆರಿಗೆ (ನಾರ್ಮಲ್ ಡೆಲಿವರಿ) ಸಾಧ್ಯವೇ ? ಐವಿಎಫ್ ನಿಂದ ಹುಟ್ಟಿದ ಶಿಶು ಮತ್ತು ಸಾಧಾರಣ ಶಿಶುಗಳಿಗೂ ಆರೋಗ್ಯದಲ್ಲಿನ ವ್ಯತ್ಯಾಸವೇನು ? ಐವಿಎಫ್ ಚಿಕಿತ್ಸೆಯನ್ನು ಯಾರು ಮತ್ತು ಯಾವ ಯಾವ ಕಾರಣಕ್ಕೆ ಪಡೆಯಬೇಕು ? ಗರ್ಭಧಾರಣೆಗೆ ಬೇಕಾಗುವ ಕನಿಷ್ಠ ವೀರ್ಯಾಣುಗಳ ಸಂಖ್ಯೆ ಎಷ್ಟು ? ಫಲೀಕರಣದಿಂದ ಗರ್ಭವತಿಯಾಗಲು ಬಳಸುವ ಅಥವಾ ಬೇಕಾಗುವ ಔಷಧಗಳು ಯಾವುವು ? ಐ ವಿ ಎಫ್ ಅನುವಂಶಿಕ ಪರೀಕ್ಷೆಗೆ ಬೇಕಾಗುವ ಸಮಯ ? ಫಲವತ್ತತೆ ಸಮಸ್ಯೆಗಳಿಗೆ ಲೇಪರೊಸ್ಕೋಪಿ ಅಥವಾ ಕೀಲು / ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆ ಹೇಗೆ ಉಪಯುಕ್ತ ? ಲೆಪರೊಸ್ಕೋಪಿಕ್ ವಿಧಾನವೆಂದರೇನು ? ಅದನ್ನು ಹೀಗೆ ಮಾಡುತ್ತಾರೆ ? ಲೆಪರೊಸ್ಕೋಪಿ ಚಿಕಿತ್ಸೆಯಿಂದ ಆಗುವ ಲಾಭಗಳೇನು ? ಪಿ ಸಿ ಓ ಯಸ್ ( ಅಂಡಾಶಯ ಚೀಲ ಸಮಸ್ಯೆಗೆ ) ಸ್ತ್ರೀ ವೈದ್ಯರ ಸಲಹೆ ಅಗತ್ಯವೇ ? ಪಿ ಸಿ ಓ ಯಸ್ ನಿಂದ ಗರ್ಭಧಾರಣೆಗೆ ತೊಂದರೆಯಾಗಬಹುದೇ ? ಐ ವಿ ಎಫ್ ಚಿಕಿತ್ಸೆಯಿಂದ ಪ್ರಯೋಜನಗಳು ಏನು ? ಋತು ಬಂಧವೆಂದರೆ ಏನು ? ಇದರಿಂದ ಆರೋಗ್ಯದ ಪರಿಣಾಮಗಳೇನು ? ಐ ವಿ ಎಫ್ ಚಿಕಿತ್ಸೆ ಬಯಸುವ ತಾಯಿಯ ವಯಸ್ಸು ಎಷ್ಟು ಮುಖ್ಯ ? ಎಂಡೋಮೆಟ್ರಿಯೋಸಿಸ್ ನಿಂದ ಸಂತಾನ ಹೀನತೆ ಸಾಧ್ಯವೇ ? ಎಂಡೋಮೆಟ್ರಿಯೋಸಿಸ್ ಎಂದರೇನು ? ಫಲವತ್ತತೆಗೂ ಇದಕ್ಕೂ ಏನು ಸಂಬಂಧ ? ಇದರಿಂದಾಗುವ ದುಷ್ಪರಿಣಾಮಗಳೇನು ? ಫಲವತ್ತತೆ ಎಂದರೇನು ? ಐ ಸಿ ಯಸ್ ಐ ಚಿಕಿತ್ಸೆಯಿಂದ ಗರ್ಭಧಾರಣೆ ಸಾಧ್ಯವೇ ? ಪಾಲಿ ಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ( ಪಿ ಸಿ ಓ ಯಸ್ ) ಬರಲು ಕಾರಣವೇನು ? ಅನಿಮಿಯತ ಋತುಚಕ್ರದ ಸಮಯದ ರಕ್ತಸ್ರಾವವಾಗುವುದಕ್ಕೆ ಕಾರಣಗಳೇನು ? ಋತುಚಕ್ರದ ( ಮುಟ್ಟಿನ ) ಸಮಯದಲ್ಲಿ ಅತಿಯಾದ ನೋವು ? ಪಿ ಸಿ ಓ ಯಸ್ ನ ಗುಣಲಕ್ಷಣಗಳೇನು?

೧. ಐವಿಎಫ್ ಚಿಕಿತ್ಸೆಯಿಂದ ಗರ್ಭಪಾತವಾಗುವ ಸಾಧ್ಯತೆ ಇದೆಯೇ ?


ಅಮೆರಿಕನ್ ಪ್ರೆಗ್ನೆನ್ಸಿ ಅಸೋಸಿಯೇಷನ್ ಪ್ರಕಾರ ನೈಸರ್ಗಿಕವಾಗಿ ಅಥವಾ ಸಧೃಢ ಹೆಂಗಸಿನ ಗರ್ಭಧಾರಣೆಯಾದಾಗಲೂ ಕೂಡ ( ಗರ್ಭಿಣಿಯರಾದಾಗಲೂಕೂಡ ) ೧೫ ರಿಂದ ೨೦ ರಷ್ಟು ಗರ್ಭಪಾತವಾಗುವ ಸಂಭವ ಇದ್ದೇ ಇರುತ್ತದೆ. ಹಾಗಾಗಿ ಐವಿಎಫ್ ಚಿಕಿತ್ಸೆ ಪಡೆಯುವ ಹೆಂಗಸರಲ್ಲಿಯೂ ಕೂಡ ಗರ್ಭಪಾತದ ಆತಂಕ ಸಂಭವ ಹೊರತಾದುದಲ್ಲ. ಉಷಾ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಐವಿಎಫ್ ಚಿಕಿತ್ಸೆ ಮತ್ತು ಅದಕ್ಕೆ ಸಂಬಂಧಿಸಿದ ಅರಿವಿದ್ದು ಮುಂಜಾಗ್ರತಾ ಸಲಹೆ ಚಿಕಿತ್ಸೆಯನ್ನು ಡಾ // ಉಷಾ.ಬಿ.ಆರ್ . ರವರು ನೀಡುವಲ್ಲಿ ಪರಿಣಿತರು.

ಐವಿಎಫ್ ಶಿಶುಗಳ ನೈಸರ್ಗಿಕ ಹೆರಿಗೆ (ನಾರ್ಮಲ್ ಡೆಲಿವರಿ) ಸಾಧ್ಯವೇ ?


ಐವಿಎಫ್ ಹಿಷುಗಳ ಜನನ ನೈಸರ್ಗಿಕ ಅಥವಾ ಸಿಸೇರಿಯನ್ ಎನ್ನುವುದಕ್ಕಿಂತ, ಅಕಾಲಿಕ ಅಥವಾ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗುವ ಹೆರಿಗೆಯಾಗುವುದಕ್ಕೆ ಅನೇಕ ಕಾರಣಗಳು ಉಂಟು . ಐವಿಎಫ್ ಚಿಕಿತ್ಸೆಯಿಂದ ಅವಳಿ ಶಿಶುಗಳ ಜನನ ಅಥವಾ ಹೆರಿಗೆಯೂ ಕೂಡ ಸಾಧಾರಣ ಅವಳಿ ಶಿಶುಗಳ ಜನನಕ್ಕೆ ಹೋಲಿಸಿದರೆ ೨೩ % ರಷ್ಟು ಬೇಗನೇ ಅಥವಾ ಮುಂಚಿತವಾಗಿ ಆಗುವ ಸಾಧ್ಯತೆ ಹೆಚ್ಚು. ಡಾ // ಉಷಾ .ಬಿ.ಆರ್. ರವರು ಇಂತಹ ಸಂಧರ್ಭದಲ್ಲಿ ಗರ್ಭಣಿ ಮತ್ತು ಶಿಶುವಿನ ಉತ್ತಾ ಆರೋಗ್ಯದ ದೃಷ್ಟಿಯಿಂದ ಸೂಕ್ತ ಹೆರಿಗೆ ಮಾಡುವಲ್ಲಿ ನಿಷ್ಣಾತರಾಗಿದ್ದರೆ.

ಐವಿಎಫ್ ನಿಂದ ಹುಟ್ಟಿದ ಶಿಶು ಮತ್ತು ಸಾಧಾರಣ ಶಿಶುಗಳಿಗೂ ಆರೋಗ್ಯದಲ್ಲಿನ ವ್ಯತ್ಯಾಸವೇನು ?


ಐವಿಎಫ್ ನಿಂದ ಜನಿಸಿದ ಮೊದಲನೇ ಮಗು ೧೯೭೮ರಲ್ಲಿ . ಆಗಲಿಂದಲೂ ವಿಜ್ಞಾನಿಗಳು ಸಂಭಾವ್ಯ ಜನನ ಸಂಬಂಧ ದೋಷಗಳ ಬಗ್ಗೆ ಕಾಳಜಿ ಮತ್ತು ಶುಶುಗಳ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಐವಿಎಫ್ ಶಿಶುಗಳು ಆರೋಗ್ಯವಾಗಿ ಕಂಡರೂ ಅಕಾಲಿಕ ಹೆರಿಗೆ, ಕಡಿಮೆ ತೂಕ, ಹೆರಿಗೆಯ ನಂತರದ ಕೆಲವು ಸಾಧಾರಣ ಸಮಸ್ಯೆಗಳು ಕಂಡಿವೆ...

ಐವಿಎಫ್ ಚಿಕಿತ್ಸೆಯನ್ನು ಯಾರು ಮತ್ತು ಯಾವ ಯಾವ ಕಾರಣಕ್ಕೆ ಪಡೆಯಬೇಕು ?


ಸಂತಾನ ಪ್ರಾಪ್ತಿ ಬಯಸುವ ದಂಪತಿಗಳಲ್ಲಿ ಸಫಲೀಕರಣದ ತೊಂದರೆಯಿದ್ದರೆ ಆಗ ಐವಿಎಫ್ ನಿಂದ ಯಶ್ಆವಿಯಾಗಿ ಮಗುವನ್ನು ಪಡೆಯುವ ಸಾಧ್ಯತೆಯಿದೆ. ಸ್ತ್ರೀ ಮತ್ತು ಪುರುಷ ಇಬ್ಬರಲ್ಲಿಯೂ ಶಾರೀರಿಕ ದೋಷಗಳು ಸಹಜ. ಡಿಂಭನಾಳದಲ್ಲಿ ಗೆಡ್ಡೆಗಳು, ಡಿಂಭನಾಳಗಳು ಮುಚ್ಚಿಹೋಗಿದ್ದರೆ, ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಅವುಗಳ ಚಲನೆ, ಹೆಂಗಸರಲ್ಲಿ ಅಂಡಾಶಯ ವೈಫಲ್ಯ, ಗರ್ಭಕೋಶದ ಗೆಡ್ಡೆಗಳು ... ಮುಂತಾದ ಕಾರಣಗಳಿಗೆ ಐವಿಎಫ್ ಚಿಕಿತ್ಸೆ ಪಡೆಯಬಹುದು. ಡಾ // ಉಷಾ.ಬಿ.ಆರ್.ರವರು ಈ ಎಲ್ಲಾ ವಿಧದ ಸ್ತ್ರೀ ಮತ್ತು ಪುರುಷರ ಫಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಿ ಚಿಕಿತ್ಸೆ ಕೊಡುವ ಪರಿಣತಿ ಮತ್ತು ಅನುಭವ ಹೊಂದಿದ್ದಾರೆ.

ಗರ್ಭಧಾರಣೆಗೆ ಬೇಕಾಗುವ ಕನಿಷ್ಠ ವೀರ್ಯಾಣುಗಳ ಸಂಖ್ಯೆ ಎಷ್ಟು ?


ದೈವ ನಿಯಮದಂತೆ ಸಫಲೀಕರಣಕ್ಕೆ ಬೇಕಾಗುವುದು ಕೇವಲ ಒಂದೇ ಒಂದು ವೀರ್ಯಾಣು ಮಾತ್ರ. ಮಿಲಿಯನ್ ಗಟ್ಟಲೆ ವೀರ್ಯಾಣುಗಳಲ್ಲಿ ಓನು ಮಾತ್ರ ಯಶಸ್ವಿಯಾಗಿ ಮೊಟ್ಟೆಯನ್ನು ತಲುಪುತ್ತದೆ. ಸಾಧಾರಣವಾಗಿ, ಪುರುಷರು ಒಂದು ಸಾರಿ ಸ್ಖಲಿಸಿದಾಗ ಸುಮಾರು ನೂರು ಮಿಲಿಯನ್ ವೀರ್ಯಾಣುಗಳು ಉತ್ಪಾತ್ತಿಯಾಗುತ್ತವೆ.

ಫಲೀಕರಣದಿಂದ ಗರ್ಭವತಿಯಾಗಲು ಬಳಸುವ ಅಥವಾ ಬೇಕಾಗುವ ಔಷಧಗಳು ಯಾವುವು ?


 • ೧. ಕ್ಲೋಮೆಫೇನ್ ಸಿಟ್ರೇಟ್ - ಪಿಟ್ಯುಯಿಟರಿ ಗ್ರಂಥಿಯು ಎಫ್ ಯಸ್ ಹೆಚ್ / ಎಲ್ ಹೆಚ್ ಎಂಬ ಹಾರ್ಮೋನನ್ನು ಹೆಚ್ಚಾಗಿಸಿ ಉತ್ಪಾದಿಸಿ , ಅದರ ಸಹಾಯದಿಂದ ಅಂಡೋತ್ಪತ್ತಿ ಸಾಧ್ಯವಾಗುವಂತೆ ಮಾಡುತ್ತದೆ.
 • ೨. ಗೊನ್ಯಾಡೊಟ್ರೋಫಿನ್ಸ್
 • ೩. ಮೆಟ್ಫಾರ್ಮಿನ್
 • ೪. ಲೆಟ್ರಾಝೋಲ್
 • ೫. ಬ್ರೋಮೋಕ್ರಿಪ್ಟಿನ್

ಐ ವಿ ಎಫ್ ಅನುವಂಶಿಕ ಪರೀಕ್ಷೆಗೆ ಬೇಕಾಗುವ ಸಮಯ ?


ಪಿ ಜಿ ಯಸ್ ಪರೀಕ್ಷೆಯ ಫಲಿತಾಂಶಗಳು ೭ ರಿಂದ ೧೦ ದಿನಗಳಲ್ಲಿ ಲಭ್ಯವಾಗುತ್ತ್ತವೆ . ಪಿ ಜಿ ಡಿ - ಪ್ರಿ ಇಂಪ್ಲಾಂಟೇಷನ್ ಡೈಯಗ್ನಾಸಿಸ್ ನಲ್ಲಿ ಐ ವಿ ಎಫ್ ಭ್ರೂಣಗಳ ಸೂಕ್ತ ತಪಾಸಣೆ ( ನಿರ್ಧರಿಸಿದ ಅನುವಂಶಿಕ ಕಾರಣಗಳಿಗೆ ) ಭ್ರೂಣವನ್ನು ಹೆಂಗಸಿನ ಗರ್ಭಾಶಯಕ್ಕೆ ವರ್ಗಾಯಿಸುವ ಮುಂಚೆ ಮಾಡಬೇಕಾಗುತ್ತದೆ.

ಫಲವತ್ತತೆ ಸಮಸ್ಯೆಗಳಿಗೆ ಲೇಪರೊಸ್ಕೋಪಿ ಅಥವಾ ಕೀಲು / ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆ ಹೇಗೆ ಉಪಯುಕ್ತ ?


ಲೇಪರೊಸ್ಕೋಪಿ ವಿಧಾನದಿಂದ ದೇಹದ ಒಳಗಿನ ಅಂಗಾಂಗಗಳನ್ನು ಪರಿತರಾದ ವೈದ್ಯರು ಸೂಕ್ಷ್ಮವಾಗಿ ವೀಕ್ಷಿಸಬಹುದು. ಈ ವಿಧಾನವು ಫಲವತ್ತತೆ ಕಾರಣಗಳಿಗೆ ಮಾಡುವುದಾದರೆ ಪರಿಣತಿ ಹೊಂದಿದ ಸ್ತ್ರೀ ರೋಗ ತಜ್ಞರು ಸಂತಾನೋತ್ಪತ್ತಿ ಅಂಗಗಳಾದ - ಅಂಡಾಶಯ, ಡಿಂಭನಾಳಗಳು ಮತ್ತು ಗರ್ಭಕೋಶಗಳನ್ನು ಲೇಪರೊಸ್ಕೋಪಿ ಮೂಲಕ ವೀಕ್ಷಿಸಿ ಫಲವತ್ತತೆಗೆ ನಿರ್ಬಂಧ ಹೇರುವ ರೋಗ ಲಕ್ಷಣಗಳನ್ನು ಗ್ರಹಿಸುತ್ತಾರೆ. ಫಲವತ್ತತೆಗೆ ನಿರ್ಬಂಧ ಅಥವಾ ತಡೆಯೊಡ್ಡುವ ಶಾರೀರಿಕ ನ್ಯೂನತೆಗಳೆಂದರೆ :

ಎಂಡೋಮೆಟ್ರಿಯೋಸಿಸ್ , ಡಿಂಭನಾಳದಲ್ಲಿನ ಗೆಡ್ಡೆಗಳು, ಡಿಂಭನಾಳ ಮುಚ್ಚಿಕೊಂಡಿದ್ದರೆ, ಅಂಗಾಂಶಗಳಲ್ಲಿ ಗಾಯದ ಬೆಳವಣಿಗೆ, ಗರ್ಭಕೋಶದ ಗೆಡ್ಡೆಗಳು, ಸಂತಾನೋತ್ಪತ್ತಿ ಅಂಗಗಳಲ್ಲಿ ನ್ಯೂನತೆಗಳು.

' ವಿವರಿಸಲಾಗದ ಫಲವತ್ತತೆ ಸಮಸ್ಯೆ ' ಎಂದಾಗ ಲೇಪರೊಸ್ಕೋಪಿ ವಿಧಾನವೇ ರಾಮಬಾಣವಿದ್ದಂತೆ. ಅಂದರೆ ಯಾವುದೇ ಹೆಂಗಸಿನಲ್ಲಿ ರೋಗ ನಿರ್ಣಾಯಕ ತಾಪಾಸಣೆಗಳೆಲ್ಲವೂ ಕ್ರಮದಂತೆ ಸಮಾಧಾನಕಾರವಾಗಿದ್ದು, ಗರ್ಭಧಾರಣೆಯು ಒಂದು ಸವಾಲಾದಾಗ ಅದನ್ನು ' ವಿವರಿಸಲಾಗದ ಫಲವತ್ತತೆಯ ಸಮಸ್ಯೆ ' ಎಂದು ಪರಿಗಣಿಸುತ್ತೇವೆ.

ಪರಿಣಿತ ವೈದ್ಯರು ಈ ಹೆಂಗಸಿನ ಸಂತಾನೋತ್ಪತ್ತಿ ಅಂಗಗಳ ಒಳ ವೀಕ್ಷಣಾ ಲೇಪರೊಸ್ಕೋಪಿ ಮೂಲಕ ನಡೆಸಿದ ನಂತರ ಫಲೀಕರಣಕ್ಕೆ ತಡೆಯೊಡ್ಡುವ ದೈಹಿಕ ಕಾರಣಗಳನ್ನು ತಿಳಿಯುತ್ತಾರೆ. ಲೆಪ್ರೊಸ್ಕೋಪಿ ಇಲ್ಲದೆ ಕಾರಣ ತಿಳಿಯಲು ಅಸಾಧ್ಯ .

ಡಾ // ಉಷಾ.ಬಿ.ಆರ್. ರವರು ಲೇಪರೊಸ್ಕೋಪಿ ಶಸ್ತ್ರ ಚಿಕಿತ್ಸೆಯ ವಿಶೇಷ ಪರಿಣತಿ ಹೊಂದಿದ್ದು ಸುಮಾರು ೫೦೦೦ ಕ್ಕೂ ಹೆಚ್ಚು ಇಂತಹ ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಸುಮಾರು ಪ್ರತಿ ದಿನವೂ ಮಾಡುತ್ತಿದ್ದಾರೆ.

ಲೆಪರೊಸ್ಕೋಪಿಕ್ ವಿಧಾನವೆಂದರೇನು ? ಅದನ್ನು ಹೀಗೆ ಮಾಡುತ್ತಾರೆ ?


ಲೇಪರೊಸ್ಕೋಪಿ ಎನ್ನುವುದು ಒಂದು ಹೊರರೋಗಿ ವಿಭಾಗದಲ್ಲೇ ಮಾಡಬಹುದಾದ ಬಹಳ ಸರಳ ವಿಧಾನ. ಇನ್ನು ' ಉದರ ದರ್ಶಕ ಚಿಕಿತ್ಸೆ ', ' ಸಣ್ಣ ರಂಧ್ರ ಚಿಕಿತ್ಸೆ', ' ನೋವಿಲ್ಲದ ಚಿಕಿತ್ಸಾ ' ವಿಧಾನವೆಂದೂ ಕರೆಯುತ್ತಾರೆ.

ಇದನ್ನು ಯಾವುದೇ ಆಸ್ಪತ್ತ್ರೆಯಲ್ಲಿನ ಸುಸಜ್ಜಿತ ಆಪರೇಷನ್ ಥೀಯೇಟರ್ ನಲ್ಲಿ ಲೇಪರೊಸ್ಕೋಪಿ ಚಿಕಿತ್ಸೆಯ ಸಲಕರಣೆಗಳನ್ನು ಬಳಸಿ ಮಾಡಲಾಗುತ್ತದೆ. ಲೇಪರೊಸ್ಕೋಪಿ ಶಸ್ತ್ರ ಚಿಕಿತ್ಸೆ ಮಾಡುವ ಮುಂಚೆ ಅರವಳಿಕೆ ಮದ್ದು ನೀಡಲಾಗುತ್ತದೆ. ನಂತರ ಲೇಪರೊಸ್ಕೋಪಿ ಪರಿಣತಿಯ ವೈದ್ಯರು :

 • ಹೊಟ್ಟೆಯಭಾಗದಲ್ಲಿ ಸಣ್ಣದಾದ ಮೂರು ಅಥವಾ ನಾಲ್ಕು ತೂತುಗಳನ್ನು ಮಾಡುತ್ತಾರೆ
 • ಹೊಟ್ಟೆಯ ಒಳಗಡೆ ಗ್ಯಾಸ್ ತುಂಬಲಾಗುತ್ತದೆ, ಆದ್ದರಿಂದ ಒಳಗಿನ ಅಂಗಾಂಗಗಳು ಮತ್ತು ಇತರ ಭಾಗಗಳನ್ನು ಸೂಕ್ಷವಾಗಿ ವೀಕ್ಷಿಸಲು ಅನುಕೂಲ
 • ಲೆಪರೊಸ್ಕೋಪಿ ಸಲಕರಣೆಯಲ್ಲಿ ಸಣ್ಣದಾದ ಕ್ಯಾಮೆರಾ ಅಳವಡಿಸಿರುತ್ತಾರೆ. ಇದರ ಮೂಲಕ ಒಳಾಂಗಣ ಅಂಗಾಂಗಗಳ ವೀಕ್ಷಣೆ ಸುಲಭ
 • ಪ್ರೋಬ್ ಊಲಕ ಒಳಾಂಗಣ ಅಂಗಾಂಗಗಳ ವೀಕ್ಷಣೆ ಮತ್ತು ಅವಕ್ಕೆ ಹೊಂದುಕೊಂಡ ಇತರ ಭಾಗಗಳನ್ನು ಸಡಿಲಿಸಲು ಸಾಧ್ಯ. ಡಾ// ಉಷಾ.ಬಿ.ಆರ್. ರವರು ಲೆಪರೊಸ್ಕೋಪಿಯನ್ನು ಕೆಲವೇ ನಿಮಿಷಗಳಲ್ಲಿ ನಡೆಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಲೆಪರೊಸ್ಕೋಪಿ ನಂತರ ರೋಗಲಕ್ಷಣವನ್ನು ಗುರುತಿಸಿ ಚಿಕಿತೆ ನೀಡಿ ಯಶಸ್ವೀ ಸ್ತ್ರೀ ರೋಗ ಶಸ್ತ್ರ ಚಿಕಿತ್ಸಕರೆನಿಸಿದ್ದಾರೆ.

ಲೆಪರೊಸ್ಕೋಪಿ ಚಿಕಿತ್ಸೆಯಿಂದ ಆಗುವ ಲಾಭಗಳೇನು ?


ಶಸ್ತ್ರ ಚಿಕಿತ್ಸೆಯ ಬೇರೆ ವಿಧಾನಗಳಿಗಿಂತ ಲೆಪರೊಸ್ಕೋಪಿ ಚಿಕಿತ್ಸೆಯಲ್ಲಿ ಆರೋಗ್ಯದ ಲಾಭಗಳು ಹೆಚ್ಚು :

 • ಹೊಟ್ಟೆಯ ಮೇಲೆ ಉದ್ದವಾಗಿ ಕೊಯ್ಯುವ ( ಗಾಯದ ) ಅಗತ್ಯವಿಲ್ಲ
 • ಸೋಂಕು ರಹಿತ ಚಿಕಿತ್ಸೆ
 • ಗಾಯವಿಲ್ಲದಹಾಗೆ ಚಿಕಿತ್ಸೆ ಸಾಧ್ಯ ಬಹು ಬೀಗ ಆರೋಗ್ಯದಲ್ಲಿ ಚೇತರಿಕೆ
 • ಕಡಿಮೆ ರಕ್ತ ಸ್ರಾವ
 • ಲೆಪರೊಸ್ಕೋಪಿ ನಂತರದ ಚಿಕಿತ್ಸೆಯಿಂದ ನಿರಾತಂಕವಾಗಿ ಗರ್ಭಧಾರಣೆಯ ಅವಕಾಶಗಳು ಹೆಚ್ಚುತ್ತದೆ

ಡಾ// ಉಷಾ.ಬಿ.ಆರ್. ರವರು ಲೆಪರೊಸ್ಕೋಪಿ ಚಿಕಿತ್ಸೆಯ ಉನ್ನತ ತರಬೇತಿ ಹೊಂದಿದ್ದು, ಖುದ್ದಾಗಿ ತಾವೇ ಮಾಡುವ ಪರಿಣತಿ ಹಾಗೂ ಅನೇಕ ವರುಷಗಳ ಅನುಭವ ಪಡೆದಿದ್ದಾರೆ

ಪಿ ಸಿ ಓ ಯಸ್ ( ಅಂಡಾಶಯ ಚೀಲ ಸಮಸ್ಯೆಗೆ ) ಸ್ತ್ರೀ ವೈದ್ಯರ ಸಲಹೆ ಅಗತ್ಯವೇ ?


ಮಾಸದ ಅಥವಾ ತಿಂಗಳಿನ ಮುತ್ತಿನ ಕ್ರಮ ವ್ಯತ್ಯಾಸಗೊಂಡಾಗ ಅಥವಾ ಪಿ ಸಿ ಓ ಎಸ್ನ ಲಕ್ಷಣಗಳಾದ ಮುಖದ ಮೇಲೆ ಕೂದಲು ಬೆಳೆಯುವುದೇ, ದೇಹದ ಇತರೆ ಬೀಡಾದ ಭಾಗಗಳಲ್ಲಿ ಕೂದಲು ಬೆಳೆಯುವುದು, ಮುಖದ ಮೇಲಿನ ಮೊಡವೆಗಳು ಕಂಡರೆ ಆಗ ಸ್ತ್ರೀ ವೈದ್ಯರ ಸಲಹೆ ಅಗತ್ಯ.

ಅಲ್ಲದ ನೀವು ಸುಮಾರು ೧೨ ತಿಂಗಳಿನಿಂದ ಪ್ರಯತ್ನಿಸಿಯೂ ಗರ್ಭಧಾರಣೆ ಸಾಧ್ಯವಾಗದಿದ್ದಾಗ ಪರಿಣಿತ ಫಲವತ್ತತೆಯ ಸ್ತ್ರೀ ವೈದ್ಯರನ್ನು ಕಾಣುವುದು ಸೂಕ್ತ.

ಡಾ// ಉಷಾ.ಬಿ.ಆರ್.ರವರು ಹರೆಯದ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಡುವ ಪಿ ಸಿ ಓ ಯಸ್ ಪಿಡುಗನ್ನು ಅದರ ಅಸಹಜ ಲಕ್ಷಣಗಳನ್ನು ಹೋಗಲಾಡಿಸಲು ಸಲಹೆ ಚಿಕಿತ್ಸೆ ನೀಡಬಲ್ಲರು

ಪಿ ಸಿ ಓ ಯಸ್ ನಿಂದ ಗರ್ಭಧಾರಣೆಗೆ ತೊಂದರೆಯಾಗಬಹುದೇ ?


ಪಿ ಸಿ ಓ ಯಸ್ ನಿಂದ ಗರ್ಭಧಾರಣೆಯು ಒಂದು ಸವಾಲಾಗುವುದಲ್ಲದೇ ಗರ್ಭಧಾರಣಾ ನಂತರದ ಸಮಸ್ಯೆಗಳಾದ ಗರ್ಭಪಾತದ ಸಂಭವ ಸಾಮಾನ್ಯವಾಗಿ ಹೆಚ್ಚು. ಆದರೂ, ದೇಹ ತೂಕದಲ್ಲಿ ಇಳಿಕೆ ಮತ್ತು ಸೂಕ್ತ ಚಿಕಿತ್ಸೆಗಳಿಂದ ಆರೋಗ್ಯಕರ ಗರ್ಭಧಾರಣೆಯು ಸಾಧ್ಯವಿದೆ.

ಡಾ// ಉಷಾ.ಬಿ.ಆರ್ ರವರ ಸಲಹೆ ಚಿಕಿತ್ಸೆ ಪಡೆದ ಹಲವಾರು ಮಹಿಳೆಯರು ಗರ್ಭವತಿಯರಾಗಿ ಮಕ್ಕಳೊಡನೆ ಸಂತೋಷದಿಂದಿದ್ದಾರೆ.

ಐ ವಿ ಎಫ್ ಚಿಕಿತ್ಸೆಯಿಂದ ಪ್ರಯೋಜನಗಳು ಏನು ?


ಮಕ್ಕಳಿಲ್ಲದ ದಂಪತಿಗಳಿಗೆ ಐ ವಿ ಎಫ್ ಒಂದು ವರದಾನ. ಜೀವನದ ಖಾಲಿತನ ತುಂಬಲು ಮತ್ತು ಪರಿಪೂರ್ಣ ಪಾರಿವಾರಿಕ ಸಂತೋಷ ಅನುಭವಿಸಲು ಐ ವಿ ಎಫ್ ಸಹಕಾರಿ. ಮಗುವಿನಕನಸು ಕಾಣುವ ದಂಪತಿಗಳಿಗೆ ತಮ್ಮದೇ ಮಗುವನ್ನು ಪಡೆಯುವ ಸೌಭಾಗ್ಯವನ್ನು ಐ ವಿ ಎಫ್ ಒದಗಿಸುತ್ತದೆ.

ಡಾ// ಉಷಾ.ಬಿ.ಆರ್. ರವರು ಐ ವಿ ಎಫ್ ಚಿಕಿತ್ಸೆಯನ್ನು ಹಲವರಿಗೆ ನೀಡಿ ಆ ಹೆಣ್ಣುಮಕ್ಕಳು ಗರ್ಭಿಣಿಯರಾಗಿ ಮಕ್ಕಳನ್ನು ಪಡೆದು ತಮ್ಮ ಸಂಸಾರ ಸುಖವನ್ನು ಪೂರ್ತಿಯಾಗಿ ಅನುಭವಿಸುತ್ತಿದ್ದಾರೆ.

ಋತು ಬಂಧವೆಂದರೆ ಏನು ? ಇದರಿಂದ ಆರೋಗ್ಯದ ಪರಿಣಾಮಗಳೇನು ?


ಮುಟ್ಟು ನಿಲ್ಲುವಿಕೆ ಅಥವಾ ಸ್ತ್ರೀಯರಲ್ಲಿ ವುಂಟಾಗುವ ಫಲವತ್ತತೆಯ ಕೊನೆಯ ಹಂತವೇ ಋತು ಬಂಧ. ಇದೊಂದು ೪೫ ರಿಂದ ೫೦ ವರುಷದಲ್ಲಿನ ಮಹಿಳೆಯರಲ್ಲಿ ಕಾಣುವ ನೈಸರ್ಗಿಕ ಕ್ರಿಯೆಯಾಗಿರುತ್ತದೆ. ಇದನ್ನು ದೈಹಿಕ ನ್ಯೂನತೆಯೆಂದು ತಿಳಿಯಬಾರದು.

ಋತುಬಂಧದಿಂದ ಆಗ ಬಹುದಾದ ತೊಂದರೆಗಳು : ಹೃದಯ ರಕ್ತನಾಳಕ್ಕೆ ಸಂಬಂಧ ಖಾಯಿಲೆಗಳು, ಓಸ್ಟೆಯೋಪೋರೊಸಿಸ್ ( ಮೂಳೆಗಳ ಸವೆತ ), ಮೂತ್ರಕೋಶದ ಅಸಂಯಮ, ಸ್ತನದ ಕ್ಯಾನ್ಸರ್ .. ಮುಂತಾದವು

ಲಕ್ಷಣಗಳು : ಹಾಟ್ ಫ್ಲಾಷಸ್ ( ಎದೆಯಲ್ಲಿ ಛಳುಕು ), ಸ್ತನದ ಮೃದುತ್ವ, ಪಿ ಎಂ ಯಸ್, ಸಂಭೋಗ ಕ್ರಿಯೆಯಲ್ಲಿ ನಿರಾಸಕ್ತಿ, ಆಯಾಸ, ಅನಿಮೀಯಾಟ ಮುತ್ತಿನ ಅವಧಿ, ಸ್ತ್ರೀ ಜನನಾಂಗದಲ್ಲಿ ಶುಷ್ಕತೆ, ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಗಳು...

ಡಾ// ಉಷಾ.ಬಿ.ಆರ್ ರವರು ಋತುಬಂಧ ಸಮಸ್ಯೆಗೆ ನಿಮ್ಮೊಡನೆ ದೀರ್ಘ ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ನೀಡುತ್ತಾರೆ.

ಐ ವಿ ಎಫ್ ಚಿಕಿತ್ಸೆ ಬಯಸುವ ತಾಯಿಯ ವಯಸ್ಸು ಎಷ್ಟು ಮುಖ್ಯ ?


ತಾಯ್ತನ ಬಯಸುವ ಮಹಿಳೆಯ ವಯಸ್ಸು ಐ ವಿ ಎಫ್ ಚಿಕಿತ್ಸೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಫಲವತ್ತತೆ ಚಿಕಿತ್ಸೆಯು ಯಶಸ್ವಿಯಾಗಬೇಕಾದರೆ ತಾಯಿಯ ವಯಸ್ಸು, ಆರೋಗ್ಯ ಪ್ರಮುಖ. ಅದರಂತೆ ಚುಕ್ತಸಾ ನಂತರ ಜೀವಂತ ಶಿಶುವಿನ ಜನನ ಪ್ರಮಾಣವೂ ಕೂಡ ತಾಯಿಯ ದೇಹದ ಆರೋಗ್ಯದ ಕ್ರಮದಂತೆ ನಡೆಯುತ್ತದೆ. ಐ ವಿ ಎಫ್ ಮತ್ತು ಐ ಸಿ ಯಸ್ ಐ ಎರಡೂ ವಿಧಾನದಲ್ಲೂ ತಾಯಿಯ ವಯಸ್ಸು ಪರಿಣಾಮ ಬೀರುತ್ತದೆ.

ಡಾ// ಉಷಾ.ಬಿ.ಆರ್. ರವರು ಫಲವತ್ತತೆಯ ಫಲಕಾರಿ ಚಿಕಿತ್ಸೆಗಳಾದ ಐ.ವಿ.ಎಫ್, ಐ.ಸಿ.ಯಸ್.ಐ ಮುಂತಾದ ವಿಧಾನಗಳಲ್ಲಿ ಉನ್ನತವಾದ ಪರಿಣತಿ ಮತ್ತು ಹಲವಾರು ವರುಷಗಳ ಅನುಭವ ಹೊಂದಿದ್ದಾರೆ. ಅನೇಕರಿಗೆ ಯಶಸ್ವೀ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಇವರದ್ದಾಗಿದೆ.

ಎಂಡೋಮೆಟ್ರಿಯೋಸಿಸ್ ನಿಂದ ಸಂತಾನ ಹೀನತೆ ಸಾಧ್ಯವೇ ?


ಎಂಡೋಮೆಟ್ರಿಯೋಸಿಸ್ ನಿಂದ ಸಂತಾನ ಹೀನತೆ ಇದು ಸಾಮಾನ್ಯವಾಗಿ ಹೆಂಗಸರಲ್ಲಿ ಇತ್ತೀಚಿಗೆ ಕಾಣುವ ಖಾಯಿಲೆ. ಇದರ ಇರುವಿಕೆ ಬಹಳ ಹೆಂಗಸರಿಗೆ ತಿಳಿದಿರುವುದಿಲ್ಲ.

ಸಂತಾನ ಹೀನತೆ ಅಥವಾ ಸಂತಾನ ಪ್ರಾಪ್ತಿ ಚಿಕಿತ್ಸೆಗಾಗಿ ತಪಾಸಣೆ ನಡೆಸಿದಾಗ ಇಲ್ಲವೇ ಇನ್ನಾವುದೇ ಅನಾರೋಗ್ಯದ ಸಂಬಂಧ ತಪಾಸಣೆ ಮಾಡಿದಾಗ ಎಂಡೋಮೆಟ್ರಿಯೋಸಿಸ್ ಇರುವುದು ಖಾತ್ರಿಯಾಗುತ್ತದೆ. ಇದು ಎಷ್ಟು ಹರಡಿದೆಯೆಂದರೆ, ಎಂಡೋಮೆಟ್ರಿಯೋಸಿಸ್ನಿಂದ ಬಳಲುತ್ತ್ತಿರುವ ೫೦ % ಮಹಿಳೆಯರಿಗೆ ಗರ್ಭಧಾರಣೆಯ ಸಮಸ್ಯೆ ಇದ್ದೇ ಇರುತ್ತದೆ.

 • ಇದರಂದಾಗುವ ಉರಿಯೂತದಿಂದ ಸೈಟೊಕಿನೆಸ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಈ ಸೈಟೊಕಿನ್ ರಾಸಾಯನಿಕವು ವೀರ್ಯಾಣು ಮತ್ತು ಮೊಟ್ಟೆಯ ಸಮೀಕರಣ ಪ್ರತಿಬಂಧಿಸುತ್ತದೆ. ಹಾಗಾಗಿ ಫಲವತ್ತತೆಯ ಸಾಧ್ಯತೆ ಬಹಳ ವಿರಳ .. !
 • ಗಾಯಗೊಂಡ ಅಂಗಾಂಶಗಳು ಮತ್ತು ಅಂಗಗಳ ಅಂಟಿಕೊಳ್ಳುವಿಕೆಗಳಿಂದಾಗಿ ಡಿಂಭನಾಳದಲ್ಲಿ ಹಾಗೂ ಗರ್ಭಕೋಶದಲ್ಲಿ ಗೆಡ್ಡೆಗಳಾಗಿ ವೀರ್ಯಾಣು ಮತ್ತು ಮೊಟ್ಟೆಗಳ ಸಮೀಕರಣಕ್ಕೆ ತೊಂದರೆಯುಂಟುಮಾಡುತ್ತದೆ.
 • ಎಂಡೋಮೆಟ್ರಿಯಂನ ಅಂಗಾಂಶಗಳು ಅಂಡಾಶಯದ ಮೇಲೆ ಕಂಡಾಗ ಅಂಡೋತ್ಪತ್ತಿ ಅಸಾಧ್ಯವಾಗುತ್ತದೆ ಮತ್ತು ಒತ್ತೆಯ ಬಿಡುಗಡೆಯಲ್ಲಿಯೂ ತೊಂದರೆಯುಂಟು.
 • ಗರ್ಭಧಾರಾನ ಸಮಸ್ಯೆಯಿರುವ ೬ ರಿಂದ ೮ ರಷ್ಟು ಸ್ತ್ರೀಯರಲ್ಲಿ ಎಂಡೋಮೆಟ್ರಿಯೋಸಿಸ್ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಎಂಡೋಮೆಟ್ರಿಯೋಸಿಸ್ ಎಂದರೇನು? ಫಲವತ್ತತೆಗೂ ಇದಕ್ಕೂ ಏನು ಸಂಬಂಧ ? ಇದರಿಂದಾಗುವ ದುಷ್ಪರಿಣಾಮಗಳೇನು ?


ಗರ್ಭಕೋಶದ ಒಳಭಾಗವೇ ಎಂಡೋಮೆಟ್ರಿಯಂ ಪದರ. ಇದು ಸಾಮಾನ್ಯವಾಗಿ ಗರ್ಭಕೋಶದಲ್ಲಿ ಮಾತ್ರ ಅದೂ ಋತುಮತಿಯರಲ್ಲಿ ಕಾಣುವ ಒಂದು ಜೈವಿಕ ಚರ್ಮದ ಪದರ. ಇದು ಪ್ರತೀ ತಿಂಗಳೂ ಮುಟ್ಟಿನಾನುಸಾರ ಸ್ಪಂದಿಸುತ್ತದೆ ಮತ್ತು ಗರ್ಭವತಿಯಾಗಲು ಹಾಗೂ ಗರ್ಭಧಾರಣೆಗೆ ಎಂಡೋಮೆಟ್ರಿಯಂ ಅತಿ ಮುಖ್ಯ.

ಹೀಗಿರುವಾಗ, ಈ ಎಂಡೋಮೆಟ್ರಿಯಂ ಅಂಗಾಂಶಗಳು ಸಾಮಾನ್ಯವಾಗಿ ಕಾಣುವ ಗರ್ಭಕೋಶದ ಸ್ಥಳದ ಬದಲಾಗಿ ಬೇರೆ ಇತರ ಭಾಗಗಳಲ್ಲಿ ಕಂಡುಬಂದು ಸಮಸ್ಯೆ ಆದರೆ ಈ ಸ್ಥಿತಿಯನ್ನು ಎಂಡೋಮೆಟ್ರಿಯೋಸಿಸ್ ಎಂದು ಕರೆಯಬಹುದು.

ಶ್ರೋಣಿಯ ಕುಹರದ ನೋವು ಸಾಮಾನ್ಯವಾಗಿ ಕಾಣಿಸುತ್ತದೆ ಜೊತೆಗೆ ಸಂತಾನ ಹೀನತೆಗೂ ಇದು ಬಲವಾದ ಕಾರಣವಾಗುತ್ತದೆ. ಎಂಡೋಮೆಟ್ರಿಯಾಸಿಸ್ ನಿಂದ ಬಳಲುತ್ತಿರುವ ೩೦ ೫ - ೫೦ % ಮಹಿಳೆಯರಲ್ಲಿ ಫಲವತ್ತತೆ ಅಥವಾ ಸಂತಾನ ಹೀನತೆ ಕಾಣುತ್ತದೆ.

ಈ ತರಹದ ಅಂಗಾಶಗಳು ಇತರ ಅಂಗಗಳ ಜೊತೆ ಅಂಟಿಕೊಂಡು ಗಾಯ, ರಕ್ತ ಸ್ರಾವ ಮತ್ತು ನೋವನ್ನು ಉಂಟುಮಾಡುತ್ತದೆ. ಎಂಡೋಮೆಟ್ರಿಯಂ ಅಂಶಗಳು ಮೊಟ್ಟ ಮೊದಲು ಶುರುವಾದ ಮುಟ್ಟಿನಿಂದ ಹಿಡಿದು ಋತುಬಂಧ ಸಮಯದವರೆವಿಗೂ ಯಾವಾಗಲಾದರೂ ಬರಬಹುದು / ಕಾಣಿಸಬಹುದು. ಕೆಲವೊಬ್ಬರಲ್ಲಿ ಗಾಯಗೊಂಡ ಅಂಗಾಂಶಗಳು ಬಹಳ ಹೆಚ್ಚಾಗಿ ಮತ್ತು ಅದರ ಲಕ್ಷಣಗಳು ತೀವ್ರವಾಗಿ ಕಂಡು ಬರುತ್ತದೆ. ಎಂಡೋಮೆಟ್ರಿಯೋಸಿಸ್ ನಿಂದಾಗುವ ದುಷ್ಪರಿಣಾಮಗಳು :

 • ಸಂಭೋಗ ಸಮಯದಲ್ಲಿ ಕಾಣುವ ನೋವು
 • ಅಂಡೋತ್ಪತ್ತಿ ಸಮಯದಲ್ಲಿ ನೋವು
 • ಸೆಳೆತ
 • ಪದೇ ಪದೇ ಮೂತ್ರದ ಸಮಸ್ಯೆಗಳು
 • ಬೆನ್ನು ನೋವು
 • ಮಲಬದ್ಧತೆ ಮತ್ತು ಅತಿಸಾರ
 • ಅತಿಯಾದ ಆಯಾಸ
 • ಹೊಟ್ಟೆ ನೋವು ( ಕರುಳಿನ ನೋವು )

ಮುಟ್ಟಿನ ಸಮಯದಲ್ಲಿ ಈ ಲಕ್ಷಣಗಳು ಉಲ್ಬಣಗೊಂಡು ಅತಿಯಾದ ನೋವು ಕಾಣಿಸಬಹುದು.

ಫಲವತ್ತತೆ ಎಂದರೇನು ?


ಫಲವತ್ತತೆ ಸಮಸ್ಯೆ ಇವೊತ್ತಿನ ದಿನದಲ್ಲಿ ಸಾಮಾನ್ಯವಾಗಿ ಸುಮಾರು ೧೧ % ರಷ್ಟು ಸಂತಾನ ಶಕ್ತ ಕಾಲಮಾನದ ದಂಪತಿಗಳಲ್ಲಿ ಕಂಡುಬರುತ್ತದೆ. ಗಂಡಸರು ಮತ್ತು ಹೆಂಗಸರು ಇಬ್ಬರಲ್ಲೂ ಸಹ ದೇಹದಲ್ಲಿ ಕೆಲವು ನ್ಯೂನತೆಗಳು ಇದ್ದು ಇಬ್ಬರಲ್ಲೂ ಸಮನಾದ ಮನಸ್ಥಿತಿ ಅಗತ್ಯ.

ದೈವಾನುಗ್ರಹದಿಂದ, ಹೊಸದಾಗಿ ಕಂಡುಹಿಡಿದ ಫಲವತ್ತತೆಯ ಔಷದೋಪಚಾರಗಳೂ ಮತ್ತು ಉನ್ನತ ಮಟ್ಟದ ಸಂತಾನೋತ್ಪತ್ತಿ ಸಂಬಂಧಿಸಿದ ತಂತ್ರಜ್ಞಾನಗಳ ಸಹಾಯದಿಂದ ಫಲವತ್ತತೆ ಸಮಸ್ಯೆಗಳಿಗೆ ಪರಿತರಾದ ವೈದ್ಯರು ಸವಾಲೊಡ್ಡಬಲ್ಲರು. ಹಾಗೆಯೇ ಅನೇಕ ಮಹಿಳೆಯರು ನಿರಾತಂಕವಾಗಿ ಗರ್ಭಿಣಿಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುವಂತೆ ಮಾಡಬಲ್ಲರು.

ಡಾ//ಉಷಾ.ಬಿ.ಆರ್. ರವರು ತಮ್ಮ ಉನ್ನತ ಮಟ್ಟದ ವ್ಯಾಸಾಂಗವನ್ನೂ, ತಮ್ಮ ಸುಧೀರ್ಘ ಮುಂದುವರೆದ ಫಲವತ್ತತೆಯ ಸಂಶೋಧನಾ ಕೆಲಸವನ್ನೂ , ವರ್ಷಗಳ ಕಾಲ ತಾವು ಮಾಡಿದ ಸಾವಿರಾರು ವಿವಿಧ ಪ್ರಕಾರಗಳ ಕುಶಲ ಶಸ್ತ್ರ ಚಿಕಿತ್ಸೆಗಳನ್ನೂ ಹಾಗೂ ತಮ್ಮದೇ ಆದ ಉಷಾ ಸ್ಪೆಷಾಲಿಟಿ ಕ್ಲಿನಿಕನ್ನು ನಿಮ್ಮೆಲ್ಲರ ಆರೋಗ್ಯ ಮತ್ತು ಕನಸುಗಳನ್ನು ನನಸಾಗಿಸುವ ಅವಕಾಶಗಳಿಗಾಗಿ ಮೀಸಲಿಟ್ಟಿದ್ದಾರೆ . ನಿಮ್ಮ ಕನಸುಗಳನ್ನು ಈಡೇರಿಸುವುದಕ್ಕೆ ಸಕಲ ವೈದ್ಯಕೀಯ ಪ್ರಯತ್ನಕ್ಕೂ ಸಿದ್ಧರಿದ್ದಾರೆ.

ಐ ವಿ ಎಫ್ : ಇದೊಂದು ' ಅಸ್ಸಿಸ್ಟಡ್ ರೆಪ್ರೊಡ್ಯೂಕ್ಟಿವ್ ಟೆಕ್ನಾಲಜಿ ' ಎಂಬ ಫಲವತ್ತತೆಯ ಚಿಕಿತ್ಸಾ ವಿಧಾನ. ಅನೇಕ ದಂಪತಿಗಳು ತಮ್ಮ ಸಂತಾನ ಪ್ರಾಪ್ತಿಗಾಗಿ ಐ ವಿ ಎಫ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಐ ವಿ ಎಫ್ ಚಿಕಿತ್ಸಾ ವಿಧಾನವನ್ನು ಒಂದು ಸುಸಜ್ಜಿತ ಲ್ಯಾಬ್ನಲ್ಲಿ ಪರಿಣತಿ ಹೊಂದಿದ ಫಲವತ್ತತೆ ತಜ್ಞರು ಅಂದರೆ ಫರ್ಟಿಲಿಟಿ ಸ್ಪೆಷಲಿಸ್ಟ್ ಮಾತ್ರ ಯಶಸ್ವಿಯಾಗಿ ಮಾಡಲು ಸಾಧ್ಯ.

ಐ ವಿ ಎಫ್ ಚಿಕಿತ್ಸಾ ವಿಧಾನದಲ್ಲಿ ತಾಯ್ತನ ಬಯಸುವ ಹೆಂಗಸಿನಿಂದ ಪರಿಷ್ಕರಿಸಿದ ಮೊಟ್ಟೆಯನ್ನು ಆರಿಸಲಾಗುತ್ತದೆ ಮತ್ತು ಗಂಡಸರಿಂದ ಆರಿಸಲ್ಪಟ್ಟ ವೀಗ್ರ್ಯಾಣುಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಒಂದು ಪೇತ್ರಿ ಡಿಶ್ನಲ್ಲಿ ಆರಿಸಲಾದ ಇವೆರಡನ್ನೂ ಕೃತಕವಾಗಿ ಸೇರಿಸಿ ಸಮೀಕರಣ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ಯಶಸ್ವಿಯಾಗಿ ಜೀವಂತ ಭ್ರೂಣದ ಜನನವಾಗುತ್ತದೆ.

ಐ ವಿ ಎಫ್ ವಿಧಾನವನ್ನು ಫಲವತ್ತತೆ ಸಮಸ್ಯೆ ಇರುವ ದಂಪತಿಗಳಲ್ಲಿ ಮತ್ತು ' ಬಾಡಿಗೆ ತಾಯ್ತನ ' ( ಸರೊಗಸಿ) ಬಯಸುವ ಗರ್ಭಧಾರಣಾ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಯೋಗಿಸಬಹುದು. ಐ ವಿ ಎಫ್ನಲ್ಲಿ ಕೃತಕ ಸಮೀಕರಣ ನಡೆಸಿ ಪಡೆದ ಭ್ರೂಣವನ್ನು " ಬಾಡಿಗೆ ತಾಯ್ತನ "' ಬಯಸುವ ಹೆಂಗಸಿನ ಗರ್ಭಾಶಯದಲ್ಲಿ ಸೇರಿಸಲಾಗುತ್ತದೆ. ಫಲವತ್ತತೆಯ ಸಂಬಂಧ ಅನೇಕ ಔಪಾದೋಪಚಾರಗಳು ಉಂಟು :

 • ಐ ವಿ ಎಫ್ ನಲ್ಲಿ ಅಂಡಾಶಯದ ಉತ್ತೇಜನಾ ಚಿಕಿತ್ಸೆಗೆ ಗೊನ್ಯಾಡೊಟ್ರೋಫಿನ್ಸ್ ಜೊತೆಗೆ ಜಿ ಏನ್ ಆರ್ ಅಂತಾಗೊನಿಸ್ಟ್ ಕೊಡಲಾಗುತ್ತದೆ ನಂತರ ದೈಹಿಕ ಕ್ರಮದನುಸಾರ ಬೇಕಾದ ಬಡವಾವಣೆ ಮತ್ತು ಬೆಳವಣಿಗೆಗೆ ಇದು ಸಹಕಾರಿ.
 • ಐ ವಿ ಎಫ್ ನಲ್ಲಿ ಅಂಡಾಶಯದ ಉತ್ತೇಜನ ಮತ್ತು ಅಂಡಾಶಯದ ನಿಯಮಿತ ನಿಗ್ರಹದಂತಹ ವಿಧಾನಗಳಿಗೆ ಯಾವುದೇ ಔಷಧಗಳಿಲ್ಲದೆಯೇ ಪ್ರಯೋಗಿಸಬಹುದು.
 • ' ಫ್ರೋಜನ್ ಎಂಬ್ರಿಯೋ ಟ್ರಾನ್ಸ್ಫರ್ ' - ಅಂದರೆ ಐ ವಿ ಎಫ್ನಲ್ಲಿ ಅಂಡಾಶಯವನ್ನು ಉತ್ತೇಜಿಸಿ ಭ್ರೂಣವನ್ನು ಕ್ರಯೋಪ್ರೆಸೆರ್ವಶನ್ ಮಾಡಿದ ನಂತರ ಗರ್ಭಾಶಯಕ್ಕೆ ಮಾಸಿಕ ಋತುಚಕ್ರದನ್ವಯ ವರ್ಗಾಯಿಸುವುದು.

ಐ ಸಿ ಯಸ್ ಐ ಚಿಕಿತ್ಸೆಯಿಂದ ಗರ್ಭಧಾರಣೆ ಸಾಧ್ಯವೇ ?


ಐ ಸಿ ಯಸ್ ಐ ಚಿಕಿತ್ಸೆ ( ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪೆರ್ಮ್ ಇಂಜೆಕ್ಷನ್ ) - ಇದು ಒಂದು ಫಲಕಾರಿ ಮತ್ತು ಪರಿಣಾಮಕಾರಿಯಾದ ಫಲವತ್ತತೆಯ ಚಿಕಿತ್ಸೆ. ಈ ವಿಧಾನದಲ್ಲಿ ತಾಯ್ತನ ಬಯಸುವ ಹೆಂಗಸಿನಿಂದ ಸುಸಜ್ಜಿತ ಲ್ಯಾಬ್ನಲ್ಲಿ ಮೊಟ್ಟೆಯನ್ನು ಸಂಗ್ರಹಿಸಿ, ಗಂಡಸಿನ ಪರಿಷ್ಕರಿಯಿದ ವೀರ್ಯಾಣುಗಳನ್ನು ಸೂಜಿಯಮೂಲಕ ಶೇಖರಿಸಿ ಸಮೀಕರಣ ನಡೆಸಲಾಗುತ್ತದೆ.

ಈ ವಿಧಾನವನ್ನು ಗಂಡಸಿನ ಸಂಬಂಧ ಸಮಸ್ಯೆಗಳಿಗೆ ಅಂದರೆ : ವೀರ್ಯಾಣುಗಳ ಪ್ರಮಾಣ, ವ್ರ್ಯಾಣುಗಳ ಚಲನೆ, ಡಮಗೇಡ್ ವಸ್ ಡೆಫೆರೆನ್ಸ್, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರೆ, ರೆಟ್ರೋಗ್ರಾದೆ ಎಜಾಕುಲೇಷನ್ ಮತ್ತು ಪ್ರತಿರಕ್ಷಣಾ ಕೊರತೆ ಕಾರಣಗಳಲ್ಲಿ ಪ್ರಯತ್ನಿಸಬಹುದು. ಹಾಗೂ ' ವಿವರಿಸಲಾಗದ ಫಲವತ್ತತೆ ' ಇಂದ ಬಳಲುತ್ತಿರುವ ಮತ್ತು ಐ ವಿ ಎಫ್ ಲಾಭ ಪಡೆಯಲಾಗದ ದಂಪತಿಗಳು ಪ್ರಯತ್ನಿಸಬಹುದು.

ಡಾ // ಉಷಾ.ಬಿ.ಆರ್. ರವರು ಐ ಸಿ ಯಸ್ ಐ ಚಿಕಿತ್ಸೆಯ ಪರಿಣಿತರು. ಹಲವಾರು ದಂಪತಿಗಳಿಗೆ ಈ ಚಿಕಿತ್ಸೆಯಿಂದ ಮಕ್ಕಳಾಗಲು ಸಲಹೆ ನೀಡುತ್ತಿದ್ದಾರೆ.

ಐ ಸಿ ಯಸ್ ಐ ಚಿಕಿತ್ಸೆಯ ಮಾನದಂಡಗಳೇನು ? ಇದರ ಚಿಕಿತ್ಸೆಯನ್ನು ಯಾರು ಪಡೆಯಬಹುದು ?

ಐ ಸಿ ಯಸ್ ಐ ಚಿಕಿತ್ಸೆಯ ಮಾನದಂಡಗಳು :

 • ಸಂತಾನಪ್ರಾಪ್ತಿ ಬಯಸುವ ದಂಪತಿಗಳಿಗೆ ಅಂಡದಾನಿ ಅಥವಾ ವೀರ್ಯಾಣು ದಾನಿಗಳು ಬೇಕಿಲ್ಲದಾಗ
 • ಗಂಡಸಿನ ಕಾರಣಗಳಾದ ವೀರ್ಯಾಣುಗಳ ಪ್ರಮಾಣ ಮತ್ತು ಚಲನೆಯ ಕೊರತೆ
 • ಫಲೀಕರಣ ಸಮಸ್ಯೆಗಳಿದ್ದರೆ
 • ಅಂಡೋತ್ಪತ್ತಿ ಅಥವಾ ಅಂಡಾಶಯದ ನ್ಯೂನತೆಗಳು
 • ಅಂಡಾಶಯದ ಗುಣಮಟ್ಟದ ಕೊರತೆಗಳಿದ್ದಾಗ

ಪಾಲಿ ಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ( ಪಿ ಸಿ ಓ ಯಸ್ ) ಬರಲು ಕಾರಣವೇನು ?


ಪಿ ಸಿ ಓ ಯಸ್ ಬರಲು ಕಾರಣಗಳು ಏನೆಂದು ನಿಖರವಾಗಿ ಇದುವರೆವಿಗೂ ತಿಳಿದುಬಂದಿಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ ಹೆಂಗಸರಲ್ಲಿ ಪುರುಷತ್ವ ಮಹತ್ವಾಹಾರ್ಮೋನುಗಳು ( ಆಂಡ್ರೋಜೆನ್ ) ಪ್ರಮಾಣ ಹೆಚ್ಚಾದಾಗ ಅವು ಅಂಡಾಶಯದಲ್ಲಿ ಅಂಡೋತ್ಪತ್ತಿ ಕ್ರಿಯೆಯನ್ನು ಪ್ರತಿರೋಧಿಸುತ್ತದೆ. ಪಿ ಸಿ ಓ ಯಸ್ ಇರುವವರಲ್ಲಿ ಆಂಡ್ರೋಜೆನ್ ಪ್ರಮಾಣ ಸಾಮಾನ್ಯಕ್ಕಿಂತ ಬಹಳ ಹೆಚ್ಚಾಗಿರುತ್ತದೆ

ಅನಿಮಿಯತ ಋತುಚಕ್ರದ ಸಮಯದ ರಕ್ತಸ್ರಾವವಾಗುವುದಕ್ಕೆ ಕಾರಣಗಳೇನು ?


ಅನಿಮಿಯತ ಋತುಚಕ್ರದ ಸಮಯದ ರಕ್ತಸ್ರಾವವಾಗುವುದಕ್ಕೆಕಾರಣಗಳು :

 • ಪ್ರೌಢಾವಸ್ಥೆ
 • ಸ್ತ್ರೀ ಜನನಾಂಗದ ಸೋಂಕುಗಳು
 • ಗರ್ಭಕಂಠದ ಉರಿಯೂತ
 • ಕ್ಯಾನ್ಸರ್ ಅಲ್ಲದ ಗರ್ಭಾಶಯದ ಗೆಡ್ಡೆಗಳು
 • ವ್ಯಾಯಾಮ ಮತ್ತು ಆಹಾರದಲ್ಲಿನ ವ್ಯತ್ಯಾಸಗಳು

ಋತುಚಕ್ರದ ( ಮುಟ್ಟಿನ ) ಸಮಯದಲ್ಲಿ ಅತಿಯಾದ ನೋವು ?


ಮುಟ್ಟಿನ ಸಮಯದಲ್ಲಿ ಕಡಿಮೆ ಅಥವಾ ಹೆಚ್ಚಾಗಿ ರಕ್ತಾಸ್ರ್ರವವಾಗುವುದಲ್ಲದೆ ಅತಿಯಾದ ನೋವು ಅನುಭವವಾಗುತ್ತದೆ. ಸೆಳೆತ ಸಾಮಾನ್ಯವಾಗಿ ಇರಿತ್ತದೆ. ಮುಟ್ಟಿನ ಸಮಯದಲ್ಲಿ ಗರ್ಭಕೋಶವು ಸಂಕುಚಿತಗೊಂಡಾಗ ನೋವು ಕಾಣಿಸುತ್ತದೆ. ಡೈಸ್ಮೆನೊರಿಯಾ, ಅಂದರೆ ಅತಿ ನೋವಿನಿಂದ ಕೂಡಿದ ಮುಟ್ಟಿನ ಸಮಯ. ಇದಕ್ಕೆ ಕಾರಣಗಳೆಂದರೆ :

 • ಗರ್ಭಾಶಯದ ಗೆಡ್ಡೆಗಳು
 • ಎಂಡೋಮೆಟ್ರಿಯೋಸಿಸ್
 • ಶ್ರೇಣಿಯ ಉರಿಯೂತದ ಖಾಯಿಲೆ

ಪಿ ಸಿ ಓ ಯಸ್ ನ ಗುಣಲಕ್ಷಣಗಳೇನು?


ಕೆಲವರಿಗೆ ಮೊದಲನೇ ಉಟ್ಟಿನ ಸಮಯದಲ್ಲಿಯೇ ಪಿ ಸಿ ಓ ಯಸ್ ನ ಲಕ್ಷಣಗಳು ಅನುಭವಕ್ಕೆ ಬರುತ್ತದೆ. ಆದರೆ , ಬಹಳ ಜನರಲ್ಲಿ ದೇಹದ ತೂಕ ಹೆಚ್ಚಾದಾಗ ಅಥವಾ ಗರ್ಭಧಾರಣೆಯ ಸಮಸ್ಯೆ ಎದುರಾದಾಗ ಇದರ ಅರಿವಾಗುತ್ತದೆ. ಪಿ ಸಿ ಓ ಯಸ್ ನ ಲಕ್ಷಣಗಳು :

 • ಅನಿಮಿಯತ ಮುಟ್ಟು - ಅಂಡೋತ್ಪತ್ತಿ ಆಗುವುದಿಲ್ಲದ ಕಾರಣ ಗರ್ಭಾಶಯದ ಪದರದ ಸೋರಿಕೆ ತಿಂಗಳಿಗೊಮ್ಮೆ ಅಸಾಧ್ಯ. ಕೆಲವರು ವರುಷಕ್ಕೆ ೮ ಬಾರಿ ಮಾತ್ರ ಮುಟ್ಟಾಗುತ್ತಾರೆ.
 • ಹೆಚ್ಚಾದ ರಕ್ತ ಸ್ರಾವ - ಅನಿಮಿಯತ ಮುಟ್ಟಿನಿಂದಾಗಿ ಅಂಡಾಶಯದ ಪದರಗಳ ಸೋರಿಕೆ ತಿಂಗಳಿಗೊಮ್ಮೆ ಅಸಾಧ್ಯವಾಗಿ ಕೆಲವೊಮ್ಮೆ ಒಮ್ಮೆಲೇ ಸಾಮಾನ್ಯಕ್ಕಿಂತ ಹೆಚ್ಚಾದ ರಕ್ತಸ್ರಾವ ಆಗುತ್ತದೆ
 • ಬೇಡದ ಕೂದಲು ಬೆಳೆಯುವಿಕೆ - ಇಂತಹ ೭೦ % ಮಹಿಳೆಯರಲ್ಲಿ ಮುಖ, ಬೆನ್ನು, ಹೊಟ್ಟೆಯ ಭಾಗ ಮತ್ತು ಎದೆಯ ಮೇಲೆ ಬೇಡದ ಕೂದಲು ಬೆಳೆಯುತ್ತದೆ
 • ಮೊಡವೆ - ಆಂಡ್ರೋಜೆನ್ ಪ್ರಮಾಣ ಹೆಚ್ಚಾದ ಕಾರಣ ದೇಹದ ಚರ್ಮದ ಕೊಬ್ಬಿನಂಶ ಹೆಚ್ಚಾಗಿ ಮುಖ, ಬೆನ್ನು ಮತ್ತು ಎದೆ ಭಾಗದಲ್ಲಿ ಮೊಡವೆಗಳು ಹರಡುತ್ತವೆ
 • ದೇಹದ ತೂಕ - ೮೦ % ಮಹಿಳೆಯರಲ್ಲಿ ದೇಹದ ತೂಕ ಹೆಚ್ಚಾಗುತ್ತದೆ, ಬೊಜ್ಜು ಕಾಣುತ್ತದೆ.
 • ತಲೆ ನೋವು - ಹಾರ್ಮೋನುಗಳ ವ್ಯತ್ಯಾಸದಿಂದ ತಲೆ ನೋವು ಸಾಮಾನ್ಯ
 • ಕಪ್ಪಾದ ಕಲೆಗಳು - ಕುತ್ತಿಗೆ, ಸ್ತನಗಳ ಮೇಲೆ ಮತ್ತು ತೊಡೆ ಸಂದುಗಳಲ್ಲಿ ಕಪ್ಪಾದ ಕಲೆಗಳು

ಐ ಯು ಐ ಚಿಕಿತೆ ಎಂದರೇನು? ಐ ಯು ಐ ನಿಂದ ಪ್ರಯೋಜನವೇನು?


ಇದನ್ನು ' ಆರ್ಟಿಫಿಷಿಯಲ್ ಇನ್ಸೆಮಿನೇಷನ್ ' ಎಂದೂ ಕರೆಯುತ್ತಾರೆ . ಇದೊಂದು ಬಹಳ ಯಶಸ್ವಿಯಾದ, ನೋವಿಲ್ಲದ, ಸರಳ, ಸುಲಭ ಮತ್ತು ಮುಖ್ಯವಾಗಿ ದುಬಾರಿಯಲ್ಲದ ಫಲೀಕರಣ ವಿಧಾನ. ಐ ಯು ಐ ವಿಧಾನದಿಂದ ೫ ರಿಂದ ೨೫ % ರಷ್ಟು ಮಹಿಳೆಯರು ಗರ್ಭಿಣಿಯರಾಗುವ ಸಾಧ್ಯತೆ ಇದೆ.

ಲ್ಯಾಬ್ನಲ್ಲಿ ಪರಿಷ್ಕರಿಸಿ ಆರಿಸಲಾದ ವೀರ್ಯಾಣುಗಳನ್ನು ಮಹಿಳೆಯ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ವೀರ್ಯಾಣುಗಳು ಅಂಡಾಣುಗಳನ್ನು ತಲುಪಿ ಫಲೀಕರಣ ಸಾಧ್ಯವಾಗುತ್ತದೆ. ಕ್ಲೋಮೆಫೇನ್ ಸಿಟ್ರೇಟ್ ಮುಂತಾದ ಫಲವತ್ತತೆಯ ಔಷಧಗಳನ್ನು ಬೇಕಾದಲ್ಲಿ ಬಳಸಲಾಗುತ್ತದೆ. ಅಂಡಾಣುಗಳನ್ನು ಗರ್ಭಕಂಠವನ್ನು ಮೀರಿ ಗರ್ಭಾಶಯದಲ್ಲಿ ಸೇರಿಸಿ ಫಲವತ್ತತೆಯ ಸಾಧ್ಯತೆ ಹೆಚ್ಚುವಂತೆ ಮಾಡಲಾಗುತ್ತದೆ.

ಯಾವುದೇ ದಂಪತಿಗೆ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗದಿದ್ದಾಗ ಮಾತ್ರ ಐ ಯು ಐ ವಿಧಾನ ಬಳಸಬಹುದು. ಗಂಡಸರಿಗೆ ಸೇರಿದ ಸಮಸ್ಯೆಗಳಲ್ಲಿ ಅಂದರೆ ವೀರ್ಯಾಣುಗಳ ಪ್ರಮಾಣ ಮತ್ತು ಚಲನೆ, ಹೆಂಗಸರ ಸಮಸ್ಯೆಗಳಾದ ಡಿಂಭನಾಳದಲ್ಲಿನ ಗೆಡ್ಡೆಅಥವಾ ಮುಚ್ಚುವಿಕೆ, ಅಂಡೋತ್ಪತ್ತಿ ಸಮಸ್ಯೆಗಳಲ್ಲಿ ಐ ಯು ಐ ಬಳಸಬಹುದು. ಮಹಿಳೆಯ ವಯಸ್ಸು ಮೀರಿದಂತೆಲ್ಲ ಫಲವತ್ತತೆಯ ಪರಿಣಾಮವೂ ಕ್ಷೀಣಿಸುತ್ತದೆ.

ಡಾ// ಉಷಾ.ಬಿ.ಆರ್. ರವರು ಅನೇಕ ವರುಷಗಳಿಂದ ಐ ಯು ಐ ಮಾಡುತ್ತಲಿದ್ದು ನೂರಾರು ದಂಪತಿಗಳಿಗೆ ಈಗಾಗಲೇ ಇದರ ಚಿಕಿತ್ಸೆಯಿಂದ ಮಕ್ಕಳಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.